ನಟಸಾರ್ವಭೌಮ ಚಿತ್ರವನ್ನು 8 ವರ್ಷಗಳ ಹಿಂದೆಯೇ ಮಾಡಬೇಕಿತ್ತು ಅನ್ನೋದನ್ನು ನೀವು ಚಿತ್ರಲೋಕದಲ್ಲಿಯೇ ಓದಿದ್ದೀರಿ. ಅದೇ ಕಥೆಯನ್ನು ಪುನೀತ್ ಸ್ವಲ್ಪ ಬಿಡಿಸಿ ಹೇಳಿದ್ದಾರೆ. ಅಂದಹಾಗೆ, ಈ ಕಥೆ ಪುನೀತ್ ಅವರ ಬಳಿ ಬಂದಿದ್ದು 2010-11ರಲ್ಲಿ. ಪುನೀತ್ ಅವರ ಜೊತೆ ಅರಸು ಮತ್ತು ಆಕಾಶ್ ಎಂಬ ಎರಡು ಬ್ಲಾಕ್ ಬಸ್ಟರ್ ಚಿತ್ರಗಳಿಗೆ ಕೆಲಸ ಮಾಡಿದ್ದ ಜನಾರ್ದನ ಮಹರ್ಷಿ, ಈ ಕಥೆಯನ್ನು ಪುನೀತ್ ಅವರ ಬಳಿ ತಂದಿದ್ದರು.
ಕಥೆ ಇಷ್ಟವಾಗಿದ್ದರೂ, ಚಿತ್ರಕಥೆಯಲ್ಲಿ ಸ್ವಲ್ಪ ಬದಲಾವಣೆ ಬೇಕಿತ್ತು. ಅದು ಬದಲಾಗುತ್ತಲೇ ಹೋಯಿತು. ಪವನ್ ಒಡೆಯರ್, ಅದನ್ನು ಅಚ್ಚುಕಟ್ಟಾಗಿ ಪಾಲಿಷ್ ಮಾಡಿದರು. ನಟಸಾರ್ವಭೌಮ ರೆಡಿಯಾಯಿತು ಎಂದು ಹೇಳಿದ್ದಾರೆ ಪುನೀತ್.
ಇನ್ನು ಮುಂದೆ ಪ್ರತಿವರ್ಷ ನನ್ನ ಸಿನಿಮಾ ಬರುವಂತೆ ನೋಡಿಕೊಳ್ಳುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ ಪುನೀತ್.