ಸುನೀಲ್ ಕುಮಾರ್ ದೇಸಾಯಿ, ಕಿಚ್ಚ ಸುದೀಪ್ ಅವರನ್ನು ಚಿತ್ರರಂಗ ಗುರುತಿಸುವಂತೆ ಮಾಡಿದ ನಿರ್ದೇಶಕ. ಸ್ಪರ್ಶ ಚಿತ್ರಕ್ಕೆ ಮುನ್ನ ಸುದೀಪ್ ನಟಿಸಿದ್ದರೂ, ಸುದೀಪ್ ಅವರೊಳಗೊಬ್ಬ ಅದ್ಭುತ ಕಲಾವಿದ ಇದ್ದಾನೆ ಎಂದು ಪರಿಚಯಿಸಿಕೊಟ್ಟವರು ದೇಸಾಯಿ. ದೇಸಾಯಿ ಅವರನ್ನು ಗುರುವಿನಂತೆ ಕಾಣುವ ಕಿಚ್ಚ ಸುದೀಪ್, ಈಗ ನ್ಯಾಷನಲ್ ಸ್ಟಾರ್.
ಈಗ ದೇಸಾಯಿ ಅವರ ಪಂಚಭಾಷಾ ಸಿನಿಮಾಗೆ ಸುದೀಪ್ ಬಲ ತುಂಬಿದ್ದಾರೆ. ಉದ್ಘರ್ಷ ಚಿತ್ರದ ಟ್ರೇಲರ್‍ಗೆ ಧ್ವನಿ ನೀಡಿದ್ದಾರೆ ಸುದೀಪ್. ವಿಶೇಷವೆಂದರೆ, ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂಗೂ ಸುದೀಪ್ ಅವರದ್ದೇ ಧ್ವನಿ ಇರಲಿದೆ. ಆರ್.ದೇವರಾಜ್ ನಿರ್ಮಾಣದ ಸಿನಿಮಾದಲ್ಲಿ ಕಬಾಲಿ ಖ್ಯಾತಿಯ ಧನ್ಸಿಕಾ, ಅನೂಪ್ ಸಿಂಗ್ ಠಾಕೂರ್, ತಾನ್ಯಾ ಹೋಪ್, ಕಬೀರ್ ಸಿಂಗ್, ಬಾಹುಬಲಿ ಪ್ರಭಾಕರ್ ಇದ್ದಾರೆ. ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ.