ಅವತಾರ ಪುರುಷ ಶರಣ್ ಅವರನ್ನು ಅಕ್ಷರಶಃ ಅವತಾರ್ ಪುರುಷ ಮಾಡಿಬಿಟ್ಟಿದ್ದಾರೆ ಸಿಂಪಲ್ ಸುನಿ. ಸುನಿ ನಿರ್ದೇಶನದಲ್ಲಿ ನಟಿಸುತ್ತಿರುವ ಶರಣ್ ಹೊಸ ಚಿತ್ರದ ಟೈಟಲ್ಲೇ ಅವತಾರ್ ಪುರುಷ.
ಅವತಾರ ಪುರುಷ ಎಂದರೆ ತಕ್ಷಣ ನೆನಪಿಗೆ ಬರೋದು ಅಂಬರೀಷ್ ಸಿನಿಮಾ. 1991ರಲ್ಲಿ ರಿಲೀಸ್ ಆಗಿದ್ದ ಅಂಬಿ-ಸುಮಲತಾ ಜೋಡಿಯ ಸಿನಿಮಾ. ಅದೇ ಹೆಸರಲ್ಲಿ ಶರಣ್ ಸಿನಿಮಾ ಮಾಡುತ್ತಿರುವುದು ವಿಶೇಷ. ಅಷ್ಟೆ ಅಲ್ಲ, ಅವತಾರ್ ಎಂದರೆ ನೆನಪಿಗೆ ಬರೋದು ಹಾಲಿವುಡ್‍ನ ಜೇಮ್ಸ್ ಕ್ಯಾಮರೂನ್ ಸಿನಿಮಾ.
ಎರಡನ್ನೂ ನೆನಪಿಸುವಂತೆ ಪೋಸ್ಟರ್ ಹೊರಬಿಟ್ಟಿದ್ದಾರೆ ಸಿಂಪಲ್ ಸುನಿ. ಅಂದಹಾಗೆ ಇದು ಶರಣ್ ಅವರಿಗೆ ಹುಟ್ಟುಹಬ್ಬದ ಗಿಫ್ಟು.
ಪುಷ್ಕರ್ ಮಲ್ಲಿಕಾರ್ಜುನಯ್ಯ, ಶರಣ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ನಿನ ಮೊದಲ ಚಿತ್ರ ಇದು. ಚಿತ್ರದಲ್ಲಿ ಶರಣ್ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.