` ಅಂತ ರೀ ರಿಲೀಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
antha to re release
Antha

ಅಂತ. ಅಂಬರೀಷ್‍ರನ್ನು ರೆಬಲ್‍ಸ್ಟಾರ್ ಮಾಡಿದ ಸಿನಿಮಾ. ಕನ್ವರ್‍ಲಾಲ್ ಮಾಡಿದ ಸಿನಿಮಾ. 1981ರಲ್ಲಿ ರಿಲೀಸ್ ಆಗಿದ್ದ ಅಂತ ಚಿತ್ರದ ಕುತ್ತೇ..ಕನ್ವರ್ ನಹಿ..ಕನ್ವರ್ ಲಾಲ್ ಬೋಲೋ.. ಎನ್ನುವ ಅಂಬಿ ಡೈಲಾಗು, ಅವರ ಸ್ಟೈಲನ್ನು ಅಭಿಮಾನಿಗಳು ಎಂದಿಗೂ ಮರೆಯಲ್ಲ. ಅಂತ ಚಿತ್ರ, ಕನ್ನಡಕ್ಕಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ಟ್ರೇಡ್‍ಮಾರ್ಕ್, ಟ್ರೆಂಡ್‍ಸೆಟ್ಟರ್.

ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಚಿತ್ರದಲ್ಲಿ ಅಂಬಿ, ಲಕ್ಷ್ಮಿ, ಜಯಮಾಲಾ, ಶಕ್ತಿಪ್ರಸಾದ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ನಟಿಸಿದ್ದರು. ಈಗ ಆ ಚಿತ್ರ ಮತ್ತೆ ಬಿಡುಗಡೆಯಾಗುತ್ತಿದೆ.

ಲಹರಿ ಸಂಸ್ಥೆಯ ಮುಖಾಂತರ ದೀಪಕ್ ಪಿಕ್ಚರ್ ಮತ್ತು ಶ್ರೀನಿವಾಸ ಪಿಕ್ಚರ್ (ಗದಗ)ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲು ಮುಂದಾಗಿವೆ. ಹೊಸ ತಂತ್ರಜ್ಞಾನದಲ್ಲಿ ಅಂತ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಬರಲಿದೆ.