ಜಗತ್ತಿನಾದ್ಯಂತ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಕೆಜಿಎಫ್ ಸಿನಿಮಾ ಈಗ ಮೊಬೈಲ್‍ಗೇ ಬರುತ್ತಿದೆ. ಥಿಯೇಟರ್‍ನಲ್ಲಿ ಕೆಜಿಎಫ್ ಇನ್ನೂ 50 ದಿನ ಪೂರೈಸಿಲ್ಲ. ಆಗಲೇ ಅಮೇಜಾನ್ ಪ್ರೈಮ್ ಆ್ಯಪ್‍ನಲ್ಲಿ ರಿಲೀಸ್ ಆಗುತ್ತಿದೆ. ಹೀಗೆ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 1.
ಫೆಬ್ರವರಿ 5ರಿಂದ ಕೆಜಿಎಫ್ ಸ್ಟ್ರೀಮಿಂಗ್ ಆರಂಭ ಎಂದು ಜಾಹೀರಾತು ನೀಡಿದೆ ಅಮೇಜಾನ್. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯ 5 ಆವೃತ್ತಿಗಳಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ಅಮೇಜಾನ್ 17 ಕೋಟಿಗೆ ಖರೀದಿಸಿತ್ತು ಎನ್ನುತ್ತಿವೆ ಮೂಲಗಳು.