ಸಿನಿಮಾ ಚೆನ್ನಾಗಿದೆ. ಸ್ಕ್ರೀನ್ ಪ್ಲೇ ಕೂಡಾ ಸೂಪರ್. ಪಾರಿವಾಳ ಹಿಡಿಯೋದನ್ನು ಚೆನ್ನಾಗಿ ಕಲಿತುಕೋ.. ಗೆಳೆಯನೂ.. ಶಿಷ್ಯನೂ ಆದ ಧನ್ವೀರ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಗಳಿದ್ದು ಮತ್ತು ಸಲಹೆ ನೀಡಿರುವುದು ಹೀಗೆ.
ಬಜಾರ್ ಚಿತ್ರ ಪ್ರದರ್ಶನವನ್ನು ಡಿ ಬಾಸ್‍ಗಾಗಿಯೇ ವಿಶೇಷವಾಗಿ ಆಯೋಜಿಸಿದ್ದ ಧನ್ವೀರ್‍ಗೆ ದರ್ಶನ್ ಮಾತು ಕೇಳಿ ಅಕಾಶವನೇ ಕೈಗೆ ಸಿಕ್ಕಿದ್ದರೆ ಅಚ್ಚರಿಯಿಲ್ಲ. ಏಕೆಂದರೆ, ಧನ್ವೀರ್ ದರ್ಶನ್ ಅವರ ಬಿಗ್ ಫ್ಯಾನ್.
ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ, ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಾಗಲೇ ಚಿತ್ರದ ಬಗ್ಗೆ ದರ್ಶನ್ ಹೊಗಳಿರುವುದು ಚಿತ್ರತಂಡಕ್ಕೆ ಪಾರಿವಾಳವೇ ಕೈಗೆ ಸಿಕ್ಕಂತಾಗಿದೆ.