ಯುವರತ್ನ ಚಿತ್ರಕ್ಕೆ ಇನ್ನೂ ನಾಯಕಿ ಫೈನಲ್ ಆಗಿಲ್ಲ. ಯಾರು.. ಯಾರು.. ಎಂದು ಹುಡುಕಾಟ ನಡೆಯುತ್ತಿರುವಾಗಲೇ ಬಾಲಿವುಡ್ ಚೆಲುವೆ ಸಯೇಷಾ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸರಸರನೆ ಸರಿದಾಡೋಕೆ ಶುರುವಾಗಿದೆ. ಈ ಸಯೇಶಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್. ದೇವಗನ್ ಅವರ ಶಿವಾಯ್ ಚಿತ್ರದ ಮೂಲಕ ತೆರೆಗೆ ಬಂದ ಸುಂದರಿ, ತೆಲುಗಿನಲ್ಲಿ ಅಖಿಲ್, ತಮಿಳಿನಲ್ಲಿ ಘಜಿನಿಕಾಂತ್, ಜುಂಗಾ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಆದರೆ, ಆಯ್ಕೆ ಫೈನಲ್ ಆಗಿಲ್ಲ ಎನ್ನುತ್ತಿರುವುದು ನಿರ್ದೇಶಕ ಸಂತೋಷ್ ಆನಂದ್ರಾಮ್. ಕನ್ನಡದ ಹುಡುಗಿಯೇ ಆದರೆ ಚೆಂದ ಎನ್ನುವುದು ನನ್ನ ಮತ್ತು ಇಡೀ ಚಿತ್ರತಂಡದ ನಿರೀಕ್ಷೆ. ಇನ್ನೂ ಹುಡುಕಾಟದಲ್ಲಿದ್ದೇವೆ. ಯಾವುದೂ ಫೈನಲ್ ಆಗಿಲ್ಲ ಅಂತಾರೆ ಸಂತೋಷ್.