ಕಿಚ್ಚ ಸುದೀಪ್ ಮತ್ತು ಸುನಿಲ್ ಶೆಟ್ಟಿ ಇಬ್ಬರಿಗೂ ಡ್ಯಾನ್ಸ್ ಎಂದರೆ ಅಷ್ಟಕ್ಕಷ್ಟೆ. ಅನಿವಾರ್ಯದ ಹೊರತಾಗಿ ಸ್ಟೆಪ್ಸ್ ಹಾಕಿದ್ದಿಲ್ಲ. ಈಗ ಅವರಿಬ್ಬರನ್ನೂ ಕುಣಿಸುತ್ತಿದ್ದಾರೆ ನಿರ್ದೇಶಕ ಕೃಷ್ಣ. ಪೈಲ್ವಾನ್ ಚಿತ್ರದ ಹಾಡಿನ ಶೂಟಿಂಗ್ ಶುರುವಾಗಿದ್ದು, ಸುನಿಲ್ ಶೆಟ್ಟಿ, ಟೀಂ ಸೇರಿಕೊಂಡಿದ್ದಾರೆ. ಹಾಡುಗಳ ಶೂಟಿಂಗ್ ನಡೆಯುತ್ತಿದೆ.
ಹೈದರಾಬಾದ್‍ನಲ್ಲಿ ಇದಕ್ಕಾಗಿಯೇ ದೊಡ್ಡ ಸೆಟ್ ಹಾಕಲಾಗಿದೆ. ಕುಸ್ತಿಯಲ್ಲಿ ಗೆದ್ದ ಬಳಿಕ ಸಂಭ್ರಮಿಸುವ ಹಾಡು ಇದಾಗಿದ್ದು, ಹಾಡಿಗೆ ಸಾಹಿತ್ಯ ಬರೆದಿದ್ದಾ ವಿ.ನಾಗೇಂದ್ರ ಪ್ರಸಾದ್.