` ಜಸ್ಟ್ ಒಂದು ಫೈಟ್.. ಒಂದೂವರೆ ಕೋಟಿ ಬಜೆಟ್ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
bharaate high budget fight scene
Srimurali Image From Bharaate

ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕ ಸುಪ್ರೀತ್ ಧಾರಾಳವಾಗಿ ಖರ್ಚು ಮಾಡುತ್ತಿದ್ದಾರೆ. ಎಷ್ಟರಮಟ್ಟಿಗೆಂದರೆ, ಚಿತ್ರದ ಒಂದು ಫೈಟ್ ಸೀನ್‍ಗಾಗಿ ಒಂದು ಕೋಟಿ 60 ಲಕ್ಷ ಬಜೆಟ್ ತೆಗೆದಿಟ್ಟಿದ್ದಾರೆ ಸುಪ್ರೀತ್.

ಆ ಸೀನ್‍ಗಾಗಿ 10ರಿಂದ 15 ಅಡಿ ಎತ್ತರದ ದುರ್ಗಾಮಾತೆಯ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಸೆಟ್ ಹಾಕಲಾಗಿದೆ. 85ಕ್ಕೂ ಹೆಚ್ಚು ಫೈಟರ್‍ಗಳು, 120 ಬಾಡಿ ಬಿಲ್ಡರ್‍ಗಳು, 400 ಜನ ಜೂನಿಯರ್ ಆರ್ಟಿಸ್ಟ್‍ಗಳಿರುವ ಸಾಹಸ ದೃಶ್ಯದ ಚಿತ್ರೀಕರಣ ಬರೋಬ್ಬರಿ 8 ದಿನ ನಡೆಯಲಿದೆ. ಸಾಹಸ ನಿರ್ದೇಶಕ ರವಿವರ್ಮ ಈ ಅದ್ಧೂರಿ ಫೈಟ್ ಸಂಯೋಜಿಸಿದ್ದಾರೆ.

ಶ್ರೀಮುರಳಿ, ಶ್ರೀಲೀಲ, ಸಾಯಿ ಕುಮಾರ್, ರವಿಶಂಕರ್, ಅಯ್ಯಪ್ಪ ನಟಿಸಿರುವ ಚಿತ್ರವಂತೂ ಅದ್ಧೂರಿಯಾಗಿ ಮೂಡಿ ಬರುತ್ತಿದೆ.

Geetha Movie Gallery

Adhyaksha In America Audio Release Images