ಅಡಚಣೆಗಾಗಿ ಕ್ಷಮಿಸಿ.. ಕೇವಲ ಟೈಟಲ್ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಸಂಗೀತ ನಿರ್ದೇಶಕ ಪ್ರದೀಪ್ ವರ್ಮ, ತಾವೇ ನಾಯಕರಾಗಿ ನಟಿಸಿರುವ ಚಿತ್ರ ಅಡಚಣೆಗಾಗಿ ಕ್ಷಮಿಸಿ. ಸದ್ಗುಣ ಮೂರ್ತಿ ಚಿತ್ರದ ನಿರ್ಮಾಪಕರು. ಅಂದಹಾಗೆ ಸದ್ಗುಣ ಮೂರ್ತಿ, ಪ್ರದೀಪ್ ವರ್ಮ ಅವರ ತಂದೆಯೂ ಹೌದು.
ಈ ಹಿಂದೆ ಜಗ್ಗೇಶ್ ಅಭಿನಯದ ವೀರಣ್ಣ, ಮನೆ ಮನೆ ರಾಮಾಯಣ ಚಿತ್ರಗಳಿಗೆ ಸಂಗೀತ ನೀಡಿದ್ದ ಸದ್ಗುಣ ಮೂರ್ತಿ, ಈಗ ಮಗನ ಚಿತ್ರಕ್ಕೆ ಗಾಯಕರಾಗಿದ್ದಾರೆ. ಇದು ಬ್ರಹ್ಮನ ಹಿಡಿ ಶಾಪನಾ.. ಇದು ನ್ಯಾಯಾನಾ.. ಪ್ರತಿ ಹಾಳೆಗು ಪ್ರತಿ ಹಾದೀಲು ಪ್ರತಿ ಕಾರಣ.. ಎಂಬ ಗೀತೆಗೆ ಧ್ವನಿ ನೀಡಿದ್ದಾರೆ ಸದ್ಗುಣ ಮೂರ್ತಿ.
ಹೈ ಪಿಚ್‍ನಲ್ಲಿ ಹಾಡಿರುವ ಈ ಹಾಡು, ಇಳಯರಾಜ ಅವರ ಧ್ವನಿಯನ್ನು ಹೋಲುತ್ತಿದೆ. ಭರತ್ ಎಸ್.ನವುಂದ ನಿರ್ದೇಶನದ ಅಡಚಣೆಗಾಗಿ ಕ್ಷಮಿಸಿ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.