ನಿರ್ಮಾಪಕ ಕೆ.ಮಂಜು, ವಿಷ್ಣುವರ್ಧನ್ ಅಭಿಮಾನಿ. ಅಷ್ಟೇ ಅಲ್ಲ, ವಿಷ್ಣು ಅಭಿಮಾನಿಯಾಗಿದ್ದುಕೊಂಡೇ ಜಮೀನ್ದಾರ, ಹೃದಯವಂತ, ನೀನೆಲ್ಲೋ ನಾನಲ್ಲೆ, ಬಳ್ಳಾರಿ ನಾಗ, ಮಾತಾಡ್ ಮಾತಾಡು ಮಲ್ಲಿಗೆ ಚಿತ್ರಗಳನ್ನು ನಿರ್ಮಿಸಿದ್ದವರು. ತಮ್ಮ ಮಗನ ಮೊದಲ ಸಿನಿಮಾ ಪಡ್ಡೆಹುಲಿ ಚಿತ್ರದಲ್ಲೂ ವಿಷ್ಣು ಅಭಿಮಾನ ಮೆರೆಯುತ್ತಿರುವ ಕೆ.ಮಂಜು, ಈಗ ಸಂಪತ್ ಕುಮಾರ್ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ.
ಸಂಪತ್ ಕುಮಾರ್ ಅನ್ನೋ ಹೆಸರನ್ನು ಚೇಂಬರ್‍ನಲ್ಲಿ ರಿಜಿಸ್ಟರ್ ಮಾಡಿಸಿರುವ ಮಂಜು, ತಮ್ಮ ಮಗನ ಮುಂದಿನ ಚಿತ್ರಕ್ಕೆ ಆ ಟೈಟಲ್ ಇಟ್ಟುಕೊಳ್ಳಲು ಯೋಚಿಸಿದ್ದಾರೆ.
ಅಂದಹಾಗೆ ಅಭಿಮಾನಿಗಳಿಗೆಲ್ಲ ಗೊತ್ತಿರುವಂತೆ ವಿಷ್ಣುವರ್ಧನ್ ಅವರ ಮೂಲನಾಮ ಸಂಪತ್ ಕುಮಾರ್. ವಿಷ್ಣುವರ್ಧನ್ ಎನ್ನುವುದು ಪುಟ್ಟಣ್ಣ ಕಣಗಾಲ್ ನಾಮಕರಣ ಮಾಡಿದ್ದ ಹೆಸರು.