ನಿರ್ಮಾಪಕ, ವಿಷ್ಣು ದಾದಾ ಕಟ್ಟರ್ ಅಭಿಮಾನಿಯಾಗಿದ್ದ ಕೆ.ಮಂಜು ತಮ್ಮ ಪುತ್ರ ಶ್ರೇಯಸ್ ಅವರನ್ನ ಚಿತ್ರರಂಗಕ್ಕೆ ಕರೆ ತರುತ್ತಿದ್ದಾರೆ. ಅದು ಪಡ್ಡೆಹುಲಿ ಚಿತ್ರದ ಮೂಲಕ. ಅಪ್ಪ ರಿಯಲ್ ಲೈಫಲ್ಲಿ ವಿಷ್ಣು ಅಭಿಮಾನಿ. ಮಗ ಶ್ರೇಯಸ್ ತಮ್ಮ ಮೊದಲ ಚಿತ್ರದಲ್ಲಿ ವಿಷ್ಣು ದಾದಾ ಫ್ಯಾನ್. ಪಡ್ಡೆಹುಲಿ ಚಿತ್ರದಲ್ಲಿ ಶ್ರೇಯಸ್ ವಿಷ್ಣು ಅಭಿಮಾನಿಯಾಗಿ ನಟಿಸಿದ್ದು, ಅಭಿಮಾನದಿಂದಲೇ ವಿಶೇಷ ಹಾಡು ಚಿತ್ರೀಕರಿಸಲಾಗಿದೆ.
ಚಿತ್ರದ ನಿರ್ದೇಶಕ ಗುರು ದೇಶಪಾಂಡೆ, ಚಿತ್ರದುರ್ಗದ ಕೋಟೆಯ ಸುತ್ತ ಈ ಹಾಡು ಚಿತ್ರೀಕರಿಸಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಹಾಡಿನ ಪ್ರದರ್ಶನ ಆಯೋಜಿಸಲಾಗಿದೆ. ರಮೇಶ್ ರೆಡ್ಡಿ ನುಂಗ್ಲಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್ ಕೂಡಾ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಚಿತ್ರದ ನಾಯಕಿ.