` ಅಪ್ಪು ಅಭಿಮಾನಿಯಿಂದ ಇಡೀ ಥಿಯೇಟರ್ ಬುಕ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth's fans buys total natasarvabhouma tickets
Puneeth With His Fan

ನಟಸಾರ್ವಭೌಮ ಚಿತ್ರದ ಬುಕ್ಕಿಂಗ್ ಶುರುವಾಗಿದ್ದೇ ತಡ, ಅಪ್ಪು ಅಭಿಮಾನಿಯೊಬ್ಬ ಇಡೀ ಥಿಯೇಟರ್‍ನ್ನೇ ಬುಕ್ ಮಾಡಿದ್ದಾನೆ. ಪುನೀತ್ ಅಭಿಮಾನಿಯಾಗಿರುವ ಅಭಿಷೇಕ್ ಎಂಬ ಈ ಹುಡುಗ ತನ್ನ ಹಾಗೂ ತನ್ನ ಗೆಳೆಯರಿಗಾಗಿ ಊರ್ವಶಿ ಥಿಯೇಟರ್‍ನ ಎಲ್ಲ 1200 ಸೀಟುಗಳನ್ನೂ ಬುಕ್ ಮಾಡಿದ್ದಾನೆ.

ಸಾಮಾನ್ಯವಾಗಿ ಇಂಥದ್ದೊಂದು ಕ್ರೇಜ್ ತಮಿಳುನಾಡು ಅಭಿಮಾನಿಗಳಲ್ಲಿದೆ. ರಜನಿಕಾಂತ್, ವಿಜಯ್, ಅಜಿತ್ ಚಿತ್ರಗಳಿಗೆ ಈ ರೀತಿ ಇಡೀ ಥಿಯೇಟರನ್ನೇ ಬುಕ್ ಮಾಡುವ ಅಭಿಮಾನಿಗಳಿದ್ದಾರೆ. ಕನ್ನಡಕ್ಕಿದು ಹೊಸದು.

ಪುನೀತ್ ಸಿನಿಮಾ ಯಾವುದೇ ರಿಲೀಸ್ ಆಗಲಿ. ಮೊದಲ ದಿನ, ಮೊದಲ ಶೋ ನೋಡಿದರೇನೇ ಸಮಾಧಾನ. ಈ ಬಾರಿ ನಾವೆಲ್ಲ ಗೆಳೆಯರೂ ಪ್ಲಾನ್ ಮಾಡಿಕೊಂಡು ಮೊದಲ ದಿನ ಎಲ್ಲರೂ ಒಟ್ಟಿಗೇ ಸಿನಿಮಾ ನೋಡಲು ಈ ರೀತಿ ಮಾಡಿದೆವು. ಕರ್ನಾಟಕದಲ್ಲೂ ಇಂತಹ ಫ್ಯಾನ್ಸ್ ಇದ್ದಾರೆ ಎನ್ನುವುದು ಬೇರೆ ಭಾಷೆಯವರಿಗೆ ಗೊತ್ತಾಗಲಿ ಬಿಡಿ ಎಂದು ಹೆಮ್ಮೆಯಿಂದ ಹೇಳಿದ್ದಾರೆ ಅಭಿ.

ನಟಸಾರ್ವಭೌಮ ಚಿತ್ರ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದ್ದು, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery