ಗೋಲ್ಡನ್ ಸ್ಟಾರ್ ಗಣೇಶ್, ಜಾಕಿ ಭಾವನಾ ಅಭಿನಯದ ಸಿನಿಮಾ 99. ಪ್ರೀತಮ್ ಗುಬ್ಬಿ ನಿರ್ದೇಶಿಸುತ್ತಿರುವ ಚಿತ್ರದ ಫಸ್ಟ್ ಲುಕ್‍ನಲ್ಲಿ ಗಣೇಶ್ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಗಡ್ಡಕ್ಕೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿರುವಾಗಲೇ ಸಿನಿಮಾ ನೋಡೋಕೆ ಕಾಯುತ್ತಿದ್ದೇನೆ ಎಂದು ಹೇಳಿರುವುದು ಕಿಚ್ಚ ಸುದೀಪ್.
ಲುಕ್ ಚೆನ್ನಾಗಿದೆ ಬ್ರದರ್. ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿರುವ ಸುದೀಪ್, 99 ಚಿತ್ರಕ್ಕೆ ಶುಭ ಹಾರೈಸಿದ್ದಾರೆ.