` ಆತ್ಮಹತ್ಯೆಗೆ ಯತ್ನಿಸಿದ್ದರು ಜಯಪ್ರದಾ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jayaprabdha contemplated suicide
Jayapradha

ಜಯಪ್ರದಾ.. ಬಾಲಿವುಡ್‍ನವರಾದರೂ ಕನ್ನಡಿಗರಿಗೆ ಚಿರಪರಿಚಿತ ಮುಖ. ಕವಿರತ್ನ ಕಾಳಿದಾಸ, ಸನಾದಿ ಅಪ್ಪಣ್ಣ, ಶಬ್ಧವೇಧಿ, ಹುಲಿಯ ಹಾಲಿನ ಮೇವು, ಹಿಮಪಾತ, ಈ ಬಂಧನ, ಹಬ್ಬ, ಸಂಗೊಳ್ಳಿ ರಾಯಣ್ಣ, ಆತ್ಮಬಂಧನ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿರುವ ಕಲಾವಿದೆ. ರಾಜ್ಯಸಭಾ ಸದಸ್ಯೆಯೂ ಆಗಿರುವ ಜಯಪ್ರದಾ ಒಂದು ಕಾಲದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ.

ಸಮಾಜವಾದಿ ಪಕ್ಷದಲ್ಲಿದ್ದಾಗ ನನ್ನ ಮತ್ತು ಅಮರ್ ಸಿಂಗ್ ಮಧ್ಯೆ ಸಂಬಂಧ ಕಟ್ಟಿದ್ದರು. ನಾನು ಅವರಿಗೆ ರಾಖಿ ಕಟ್ಟಿದ್ದೆ. ಆದರೂ ಮಾತುಗಳಿಗೇನೂ ಬರ ಇರಲಿಲ್ಲ. ಮುಲಾಯಂ ಸಿಂಗ್ ಕೂಡಾ ಮಾತನಾಡುತ್ತಿರಲಿಲ್ಲ. ಅದು ನನ್ನನ್ನು ಘಾಸಿಗೊಳಿಸಿತ್ತು. ಅದೇ ಪಕ್ಷದ ಅಜಂ ಖಾನ್, ನನ್ನ ಮೇಲೆ ಆಸಿಡ್ ದಾಳಿ ಮಾಡುವ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲ, ನನ್ನ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಸೋಷಿಯಲ್ ಮೀಡಿಯಾಗೆ ಹರಿಯಬಿಟ್ಟಿದ್ದರು. ಆ ಎಲ್ಲ ಘಟನೆಗಳ ಸಮಯದಲ್ಲಿ ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಹೇಳಿಕೊಂಡಿದ್ದಾರೆ ಜಯಪ್ರದಾ.

ನಾನು ಸಾಯಲು ಯತ್ನಿಸಿದಾಗ ಅಮರ್ ಸಿಂಗ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಲ್ಲಿದ್ದರು. ಆಸ್ಪತ್ರೆಯಿಂದ ಬಂದ ಮೇಲೆ ಮತ್ತೆ ನನ್ನ ಬೆನ್ನಿಗೆ ನಿಂತರು. ನಾನು ಈಗಲೂ ಅವರಿಗೆ ರಾಖಿ ಕಟ್ಟುತ್ತೇನೆ. ಅವರು ನನ್ನ ಗಾಡ್‍ಫಾದರ್ ಎಂದಿದ್ದಾರೆ ಜಯಪ್ರದಾ. 

Shivarjun Movie Gallery

KFCC 75Years Celebrations and Logo Launch Gallery