ಯಜಮಾನ. ಬಹುನಿರೀಕ್ಷಿತ ದರ್ಶನ್ ಸಿನಿಮಾ. ಎರಡು ವರ್ಷಗಳಿಂದ ದರ್ಶನ್ ಚಿತ್ರಗಳಿಲ್ಲದೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ದರ್ಶನ್ ಫ್ಯಾನ್ಸ್ ಸಿನಿಮಾ ಥಿಯೇಟರಿಗೆ ಬರುವುದನ್ನೇ ಎದುರು ನೋಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರಕ್ಕೆ ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಪಕರು. ಆದರೆ, ಕುತೂಹಲದ ಸಂಗತಿ ಇದ್ಯಾವುದೂ ಅಲ್ಲ. ಟೋಟಲ್ ಟೀಂನಲ್ಲೇ ನಿರ್ದೇಶಕರ ಸಂಗಮವಿದೆ.
ಸುಮ್ಮನೆ ನೋಡಿ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಬಿ.ಸುರೇಶ್ ಸ್ವತಃ ಒಬ್ಬ ನಿರ್ದೇಶಕರು. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವವರು. ಪಿ.ಕುಮಾರ್ ಮತ್ತು ಹರಿಕೃಷ್ಣ ಚಿತ್ರದ ನಿರ್ದೇಶಕರು. ಹರಿಕೃಷ್ಣ ಈ ಸಿನಿಮಾದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.
ಇನ್ನು ಚಿತ್ರಕ್ಕೆ ಹಾಡು ಬರೆದಿರುವ ಚೇತನ್ ಕುಮಾರ್, ಯೋಗರಾಜ್ ಭಟ್, ಕವಿರಾಜ್, ಎಲ್ಲರೂ ನಿರ್ದೇಶಕರೇ. ಅಂದಹಾಗೆ ಸಂತೋಷ್ ಆನಂದ್‍ರಾಮ್ ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಒಟ್ಟಿನಲ್ಲಿ ಯಜಮಾನನ ಮನೆಯಲ್ಲಿ ನಿರ್ದೇಶಕರದ್ದೇ ದರ್ಬಾರು.