` ಪಾರಿವಾಳಗಳ ರೇಸ್ ಜಗತ್ತಿಗೆ ಸ್ವಾಗತ.. - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
welcome to the world of pigeon racinf
Bazaar

ಸಿಂಪಲ್ ಸುನಿ ನಿರ್ದೇಶನದ ಬಜಾರ್ ತೆರೆಗೆ ಬರುತ್ತಿದೆ. ಪಾರಿವಾಳಗಳ ರೇಸ್ ಜಗತ್ತಿಗೆ ಸ್ವಾಗತ ಕೋರುತ್ತಿದೆ. ನಿಜವಾದ ಪಾರಿವಾಳಗಳ ಜೊತೆ ಧನ್ವೀರ್ ಮತ್ತು ಆದಿತಿ ಪ್ರಭುದೇವ ಎಂಬ ಹೊಚ್ಚ ಹೊಸ ಪಾರಿವಾಳಗಳೂ ಇವೆ. ಒಂದು ನಾಯಕ ಪಾರಿವಾಳ. ಇನ್ನೊಂದು ನಾಯಕಿ ಪಾರಿವಾಳ.

ಪಾರಿವಾಳಗಳ ರೇಸ್, ಬೆಟ್ಟಿಂಗ್ ಜಗತ್ತು, ಭೂಗತ ಲೋಕ ಎಲ್ಲವನ್ನೂ ಒಳಗೊಂಡಿರುವ ಕಥೆಯಲ್ಲಿ ನವಿರಾದ ಪ್ರೇಮಕಥೆಯೊಂದಿದೆ. ಇದು ಕನ್ನಡಕ್ಕೆ ಹೊಸತು. ಸ್ಟೋರಿಯನ್ನು ಹೇಳಿರುವ ಶೈಲಿಯೂ ಹೊಸತು ಎನ್ನುವ ಭರವಸೆ ಸಿಂಪಲ್ ಸುನಿ ಅವರದ್ದು.

ಪಾರಿವಾಳಗಳ ರೇಸ್ ಮತ್ತು ಬೆಟ್ಟಿಂಗ್‍ನ ದುಷ್ಟ್ಪರಿಣಾಮಗಳ ಬಗ್ಗೆ ಚಿತ್ರದಲ್ಲೊಂದು ಅದ್ಭುತ ಸಂದೇಶವಿದೆ ಎಂದಿದ್ದಾರೆ ನಿರ್ಮಾಪಕ ತಿಮ್ಮೇಗೌಡ. ಮಾರಿ-2 ಚಿತ್ರದಲ್ಲಿ ಪಾರಿವಾಳಗಳ ಕಥೆಯಿದ್ದರೂ, ಅದೇ ಬೇರೆ.. ಇದೇ ಬೇರೆ. 

Adi Lakshmi Purana Movie Gallery

Rightbanner02_butterfly_inside

Dasharatha Movie Gallery