ಇಂದು ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಮಂಡನೆಯಾಗುತ್ತಿದೆ. ಇದೇ ದಿನ.. ಅಲ್ಲಿ ಬಜೆಟ್ ಮಂಡನೆಯಾಗುತ್ತಿರುವಾಗಲೇ ಇಲ್ಲಿ ಮಟಾಶ್ ಸಿನಿಮಾ ರಿಲೀಸ್ ಆಗಿರುತ್ತೆ. ಇದು ನೋಟ್‍ಬ್ಯಾನ್ ಕುರಿತ ಸಿನಿಮಾ. ಎಸ್.ಡಿ.ಅರವಿಂದ್ ನಿರ್ದೇಶನದ ಈ ಚಿತ್ರದ ಮೂಲಕಥೆಯೇ ನೋಟ್‍ಬ್ಯಾನ್.
ನೋಟ್‍ಬ್ಯಾನ್ ನಂತರ ಎದುರಾಗಿದ್ದ ಸಮಸ್ಯೆಗಳನ್ನು, ಸವಾಲುಗಳನ್ನು ಇಲ್ಲಿ ಹಾಸ್ಯಮಯವಾಗಿ ಹೇಳಲಾಗಿದೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮತ್ತೊಬ್ಬ ಮೊಮ್ಮಗ ಸಮರ್ಥ್ ಚಿತ್ರದ ಹೀರೋ. ಅವಿನಾಶ್ ನರಸಿಂಹರಾಜು ಪ್ರಮುಖ ಪಾತ್ರದಲ್ಲಿದ್ದಾರೆ. ಐಶ್ವರ್ಯ ಸಿಂಧೋಗಿ ನಾಯಕಿ.