` ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raghavendra rajkumar to act in pogaru
Dhruva Sarja, Raghavendra Rajkumar

ರಾಘವೇಂದ್ರ ರಾಜ್‍ಕುಮಾರ್, ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿದ್ದಾರೆ. ಅವರೇ ಹೀರೋ ಆಗಿ ನಟಿಸಿರುವ ಅಮ್ಮನ ಮನೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತ್ರಯಂಬಕಂ ಅನ್ನೋ ಚಿತ್ರದಲ್ಲಿಯೂ ನಟಿಸುತ್ತಿರುವ ರಾಘಣ್ಣ, ಅತಿಥಿ ನಟರಾಗಿ ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಧ್ರುವ-ರಶ್ಮಿಕಾ ಮಂದಣ್ಣ-ನಂದಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು ಚಿತ್ರದಲ್ಲಿ ರಾಘಣ್ಣ ಅವರಿಗಾಗಿಯೇ ವಿಶೇಷ ಪಾತ್ರವಿದೆಯಂತೆ. ಅದಕ್ಕಾಗಿ ರಾಘಣ್ಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಣ್ಣ ಶಿವರಾಜ್ ಕುಮಾರ್ ಹೀರೋ ಆಗಿ ನಟಿಸಿದ್ದ ಆಸೆಗೊಬ್ಬ ಮೀಸೆಗೊಬ್ಬ ಚಿತ್ರವನ್ನು ಬಿಟ್ಟರೆ, ಬೇರೆ ಯಾವುದೇ ಚಿತ್ರದಲ್ಲಿ ರಾಘಣ್ಣ ಅತಿಥಿ ನಟರಾಗಿ ನಟಿಸಿಲ್ಲ. ಪೊಗರು ಮೂಲಕ ಮತ್ತೊಮ್ಮೆ ಅತಿಥಿ ನಟರಾಗುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

Babru Teaser Launch Gallery

Odeya Audio Launch Gallery