ಸಿಂಪಲ್ ಸುನಿ ನಿರ್ದೇಶನದ ಬಜಾರ್ ನಾಳೆ ತೆರೆಗೆ ಬರುತ್ತಿದೆ. ಅವರ ಹೆಸರಿನ ಜೊತೆಗೆ ಸಿಂಪಲ್ ಅಂಟಿಕೊಂಡಿದ್ದರೂ, ಬಜಾರ್ ಚಿತ್ರದಲ್ಲಿ ಮನರಂಜನೆ ಡಬ್ಕು ಡಬಲ್ ಇದೆಯಂತೆ. ಹಾಗಂತ ಹೇಳಿರೋದು ಹೀರೋ ಧನ್ವೀರ್.
ಇದು ನನ್ನ ಮೊದಲ ಸಿನಿಮಾ. ಸೀನ್ ಚೆನ್ನಾಗಿ ಮಾಡಿದಾಗ ಸುನಿಯವರು ನನ್ನನ್ನು ಹೊಗಳಿದ್ದಾರೆ. ಕೆಟ್ಟದಾಗಿ ಮಾಡಿದಾಗ ಬೈದೂ ಇದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಮರೆಯಲಾಗದ ಅನುಭವ ಎಂದು ಹೇಳಿಕೊಂಡಿದ್ದಾರೆ.
ಆದಿತಿ ಪ್ರಭುದೇವ ಜೊತೆಗಿನ ರೊಮ್ಯಾನ್ಸ್ ಯುವಕರಿಗೆ ಇಷ್ಟವಾಗುತ್ತೆ. ಆ್ಯಕ್ಷನ್ ಸೀನ್ಸ್ ಮೈ ನವಿರೇಳಿಸುತ್ತೆ. ಫ್ಯಾಮಿಲಿ ಡ್ರಾಮಾ, ಕಾಮಿಡಿ ಇಷ್ಟವಾಗುತ್ತೆ. ಒಟ್ಟಾರೆ ಇದು ಫುಲ್ ಮನರಂಜನೆ ಇರೋ ಸಿನಿಮಾ ಅನ್ನೋದು ಹೀರೋ ಕೊಡುವ ಭರವಸೆ.
ತಿಮ್ಮೇಗೌಡ ನಿರ್ಮಾಣದ ಚಿತ್ರದಲ್ಲಿ ಭೂಗತ ಜಗತ್ತು ಮತ್ತು ಪಾರಿವಾಳಗಳ ರೇಸ್ ಸ್ಟೋರಿ ಇದೆ.