` ಆ ನಾಗಕನ್ನಿಕೆಯೇ ಬಜಾರ್‍ನ ಪಾರಿಜಾತ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
that nagakannike is herine of bazaar
Aditi Prabhudeva Image from Bazaar

ಬಜಾರ್ ಚಿತ್ರದ ಹೀರೋಯಿನ್ ಪಾರಿಜಾತ. ಆ ಪಾತ್ರದಲ್ಲಿ ನಟಿಸಿರುವ ಆದಿತಿ ಪ್ರಭುದೇವ ಮೂಲತಃ ನಾಗಕನ್ನಿಕೆ. ಹೌದಾ ಅಂಥಾ ಬೆರಗಾಗಬೇಡಿ. ಅವರು ಖ್ಯಾತರಾಗಿದ್ದೇ ನಾಗಕನ್ನಿಕೆ ಧಾರವಾಹಿಯಿಂದ. ಅದಾದ ಮೇಲೆ ಧೈರ್ಯಂ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದ ಆದಿತಿ, ಈಗ ಸ್ಯಾಂಡಲ್‍ವುಡ್‍ನಲ್ಲಿ ಫುಲ್ ಡಿಮ್ಯಾಂಡ್ ಇರೋ ನಟಿ.

ಅವರೀಗ ತೋತಾಪುರಿ, ಸಿಂಗ, ಆಪರೇಷನ್ ನಕ್ಷತ್ರ, ಪ್ರೀತಿ ಪ್ರಾಪ್ತಿರಸ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಜಾರ್ ಚಿತ್ರದಲ್ಲಿ ಅವರದ್ದು ಪಾರಿಜಾತ ಅನ್ನೋ ಮಿಡ್ಲ್ ಕ್ಲಾಸ್ ಹುಡುಗಿಯ ಪಾತ್ರ. ತಾಯಿಯಿಲ್ಲದ ಹುಡುಗಿ. ಮನೆಯನ್ನು ನಡೆಸಿಕೊಂಡು ಹೋಗಲು ಟೈಲರಿಂಗ್ ಕೆಲಸ ಮಾಡುವ ಬಡ ಮಧ್ಯಮ ವರ್ಗದ ಹುಡುಗಿಯಾಗಿ ನಟಿಸಿದ್ದಾರೆ ಆದಿತಿ.

ಆ ಪಾತ್ರಕ್ಕಾಗಿ ನಾನು ಟೈಲರ್‍ಗಳ ಬಳಿ ಹೋಗಿ, ಸೂಜಿ ಹಾಕೋದು, ಹೊಲಿಯೋದು, ಪೆಡಲ್ ಮಾಡೋದನ್ನು ಕಲಿತುಕೊಂಡೆ. ಇಲ್ಲದಿದ್ದರೆ, ಅದು ನ್ಯಾಚುರಲ್ಲಾಗಿ ಬರುತ್ತಿರಲಿಲ್ಲ. ಅಭಿನಯಕ್ಕೆ ಅವಕಾಶ ಇರುವ ಪಾತ್ರ ಸಿಕ್ಕಿರುವ ಖುಷಿಯಿದೆ ಎಂದಿದ್ದಾರೆ ಆದಿತಿ.

ಧನ್ವೀರ್ ನಾಯಕರಾಗಿ ನಟಿಸಿರುವ ಚಿತ್ರಕ್ಕೆ ಸಿಂಪಲ್ ಸುನಿ ನಿರ್ದೇಶನವಿದೆ. ಪಾರಿವಾಳ, ಭೂಗತ ಲೋಕ ಮಧ್ಯೆದಲ್ಲೊಂದು ಲವ್ ಸ್ಟೋರಿ.. ಹೀಗೆ ಕಮರ್ಷಿಯಲ್ ಅಂಶಗಳೇ ಇರುವ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery