` ಡಾ.ರಾಜ್ ಕುಮಾರ್ ರಸ್ತೆಗೆ ಬೆಳ್ಳಿ ಹಬ್ಬದ ಸಂಭ್ರಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
its silver jubilee for rajkumar road
Its Silver Jubilee For Dr Rajkumar's Road

ಡಾ.ರಾಜ್‍ಕುಮಾರ್ ರಸ್ತೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಸರಿಯಾಗಿ 25 ವರ್ಷಗಳ ಹಿಂದೆ.. ಉದ್ಘಾಟನೆಯಾಗಿದ್ದ ಡಾ.ರಾಜ್ ಕುಮಾರ್ ರಸ್ತೆ ಈ ಬಾರಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ.

1994ರ ಜನವರಿ ತಿಂಗಳಲ್ಲಿ ರಾಜಾಜಿನಗರದ ಪ್ರಸನ್ನ ಟಾಕೀಸ್‍ನಿಂದ ಸೋಪ್ ಫ್ಯಾಕ್ಟರಿವರೆಗಿನ 80 ಆಡಿ ರಸ್ತೆಗೆ ಡಾ.ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಅದು ಡಾ.ರಾಜ್ ಹೆಸರಿನಲ್ಲಿಯೇ ಜನಮಾನಸದಲ್ಲಿ ನೆಲೆಸಿದೆ.

ಆಗ ರಾಜ್ಯದ ಹಲವಾರು ಕನ್ನಡ ಸಂಘಟನೆಗಳು, ಉಮೇಶ್ ಬಣಕಾರ್ ಅವರ ತಂದೆ ಮಹದೇವ ಬಣಕಾರ್, ಭಾ.ಮಾ. ಹರೀಶ್, ಎಂ.ಜಿ. ರಾಮಮೂರ್ತಿ, ಉಮೇಶ್ ಬಣಕಾರ್, ಸಾ.ರಾ.ಗೋವಿಂದು ಸೇರಿದಂತೆ ಹಲವರು ಈ ರಸ್ತೆಗೆ ಡಾ.ರಾಜ್ ಕುಮಾರ್ ಹೆಸರು ಇಡುವಂತೆ ಆಗಿನ ಪಾಲಿಕೆಗೆ ಮನವಿ ಮಾಡಿದ್ದರು. ಪಾಲಿಕೆ ಒಪ್ಪಿಕೊಂಡಿತ್ತು.

ಇದಾದ ಮೇಲೆ ಪಾಲಿಕೆ ಧನ್ಯವಾದ ಅರ್ಪಿಸಿ ಸಾ.ರಾ.ಗೋವಿಂದು ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಚಿತ್ರನಟ ಅಭಿಜಿತ್, ಪಾಲಿಕೆಯ ಕೆಲಸವನ್ನು ಅಭಿನಂದಿಸಿ ಬಿತ್ತಿಚಿತ್ರ ಮಾಡಿ ಹಂಚಿದ್ದರು.

Related Articles :-

It's Silver Jubilee For Dr.Rajkumar Road

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery