` ಮೇ ತಿಂಗಳಿಂದ ಕೆಜಿಎಫ್ ಚಾಪ್ಟರ್ 2 ಆರಂಭ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
kgf chapter 2 shooting to start from may
KGF

ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣವನ್ನು ಮೇ ತಿಂಗಳಿಂದ ಆರಂಭಿಸಲು ಚಿತ್ರತಂಡ ನಿರ್ಧರಿಸಿಬಿಟ್ಟಿದೆ. ಚಾಪ್ಟರ್ 2ನ ಶೇ.25ರಷ್ಟು ಚಿತ್ರೀಕರಣವನ್ನು ಈಗಾಗಲೇ ಮುಗಿಸಿರುವ ಚಿತ್ರತಂಡ, ಉಳಿದ ಭಾಗದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಕೆಜಿಎಫ್ ಚಾಪ್ಟರ್ 1ಕ್ಕೆ ಮಾಡಿಕೊಂಡಂತೆಯೇ, ಶೂಟಿಂಗಿಗೆ ಹೋಗುವ ಮುನ್ನವೇ ಎಲ್ಲವನ್ನೂ ತಯಾರು ಮಾಡಿಕೊಳ್ಳುತ್ತಿದೆ ಕೆಜಿಎಫ್ ಟೀಂ.

ಯಶ್ ಈಗಾಗಲೇ ಗಡ್ಡ ಬೆಳೆಸೋಕೆ ಶುರು ಮಾಡಿದ್ದಾರೆ. ಮೇ ತಿಂಗಳ ಹೊತ್ತಿಗೆ ಕೆಜಿಎಫ್ ಚಾಪ್ಟರ್ 1 ಲೆವೆಲ್ಲಿಗೆ ಬರಲಿದೆ ಯಶ್ ಗಡ್ಡ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಚಿತ್ರ ರೆಡಿಯಾಗುತ್ತಿದೆ. ಸದ್ಯಕ್ಕಂತೂ ಯಶ್ ಕೆಜಿಎಫ್ ಬಿಟ್ಟು ಬೇರೆ ಧ್ಯಾನ ಮಾಡೋದಿಲ್ಲ. ಕೆಜಿಎಫ್ ಚಾಪ್ಟರ್ 2, 2020ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.