` ಭಟ್ರಿಗೇ ಚಾಲೆಂಜಾ..? ನಾವ್ ಮನೇಲಿರೋದಿಲ್ಲ ಅಂತಾವ್ರೆ ಹೆಣ್ಮಕ್ಳು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
naavu manelirodilla song thrills yogaraj bhatt
Naavu Manelirodilla Song

ಯೋಗರಾಜ್ ಭಟ್ಟರು, ವಿಕ್ಟರಿ-2 ಚಿತ್ರಕ್ಕೆ ಬರೆದಿದ್ದ ಹಾಡು `ನಾವ್ ಮನೆಗ್ ಹೋಗೋದಿಲ್ಲ.. ' ಹಾಡು ಬೊಂಬಾಟಾಗಿ ಹಿಟ್ ಆಗಿತ್ತು. ಆ ಹಾಡಿನ ಚಿತ್ರ ವಿಚಿತ್ರ ವರ್ಷನ್‍ಗಳೂ ಬಂದಿದ್ವು. ಆದರೆ, ಈಗ ಬಂದಿರೋ ಈ ವರ್ಷನ್ ಇದ್ಯಲ್ಲ.. ಪಕ್ಕಾ ಭಟ್ಟರಿಗೆ ಚಾಲೆಂಜ್ ಹಾಕೋವಂತಹದ್ದು. 

ನಾವ್ ಮನೆಲ್ ಇರೋದಿಲ್ಲ.. ಎಂದು ಶುರುವಾಗೋ ಹಾಡಿನಲ್ಲಿ ಗಂಡಂದಿರನ್ನು ಕಾಲೆಳೆಯುವ ಹೆಂಡತಿಯರಿದ್ದಾರೆ. ಕೇಳುಗರು ಹಾಡು ಕೇಳಿ ಥ್ರಿಲ್ಲಾಗಿದ್ದಾರೆ. ಭಟ್ಟರು ನಕ್ಕಿದ್ದಾರೆ. ಶರಣ್, ಸಾಧುಕೋಕಿಲ , ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಎಲ್ಲರೂ ಹಾಡನ್ನು ಹಿಂಗೂ ಬರೆಯಬಹುದಾ ಎಂದುಕೊಂಡಿದ್ದಾರೆ.

ಅಂದಹಾಗೆ ಕ್ವಾಟ್ಲೆ ಸಿನಿಮಾ ನಿರ್ದೇಶಿಸಿದ್ದ ಚಂದ್ರಕಲಾ ಅವರು ಬರೆದಿರೋ ಸಾಹಿತ್ಯಕ್ಕೆ, ವರ್ಷಾ ಸುರೇಶ್ ಮತ್ತು ಚಂದ್ರಕಲಾ ಅವರೇ ಧ್ವನಿ ಕೊಟ್ಟಿದ್ದಾರೆ. ಹೆಂಗಸ್ರು ಕೇಳ್ತಾ ಅವ್ರೆ.. ಉತ್ರ ಕೊಡ್ರಪ್ಪಾ..