ಸಜ್ಜಿ ರೊಟ್ಟಿ ಚವಳಿಕಾಯ್.. ಪದಗಳು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರೋದು ಪಕ್ಕಾ. ಅದು ಉತ್ತರ ಕರ್ನಾಟಕ ಸ್ಪೆಷಲ್. ಈ ಸಾಲುಗಳೊಂದಿಗೆ ಆರಂಭವಾಗುವ ಗೀತೆಯನ್ನು ಪುನೀತ್ ಹಾಡಿದ್ದು, ಮಟಾಶ್ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.
ಉತ್ತರ ಕರ್ನಾಟಕ ಶೈಲಿಯ ಈ ಹಾಡನ್ನು ಬರೆದಿರುವುದು ಸುನಿಲ್ ಕುಮಾರ್ ಸುಧಾಕರ್. ಆ ಹಾಡಿನ ಕಿಕ್ ಹೆಚ್ಚಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಪುನೀತ್ ಹಾಡಿನ ಜೋಶ್ನ್ನು ಹೆಚ್ಚಿಸಿದ್ದಾರೆ ಎಂದು ಖುಷಿಪಟ್ಟಿದ್ದಾರೆ ನಿರ್ದೇಶಕ ಕಮ್ ನಿರ್ಮಾಪಕ ಎಸ್.ಡಿ. ಅರವಿಂದ್. ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.