` ಫೆಬ್ರವರಿ 1ಕ್ಕೆ ಮಟಾಶ್ - ಲಾಸ್ಟ್‍ಬಸ್ ಖ್ಯಾತಿ ನಿರ್ದೇಶಕನ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mataash to releas this week
Mataash

ಲಾಸ್ಟ್‍ಬಸ್ ಸಿನಿಮಾ ನೆನಪಿದೆಯಲ್ಲವೇ. ಆ ಚಿತ್ರದ ಮೂಲಕ ಪ್ರೇಕ್ಷಕರ ಎದೆಯಲ್ಲಿ ತಲ್ಲಣದ ಅಲೆ ಎಬ್ಬಿಸಿದ್ದ ನಿರ್ದೇಶಕ ಎಸ್.ಡಿ.ಅರವಿಂದ್ ಮಟಾಶ್ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇದೇ ಫೆಬ್ರವರಿ 1ರಂದು ಸಿನಿಮಾ ರಿಲೀಸ್ ಆಗುತ್ತಿದೆ.

ಇದು ನೋಟ್‍ಬ್ಯಾನ್ ಸುತ್ತ ನಡೆಯುವ ಕಥೆ. ನಾಲ್ವರು ಹುಡುಗ-ಹುಡುಗಿಯರು, ನೋಟ್‍ಬ್ಯಾನ್, ಭೂಗತ ಜಗತ್ತು.. ಎಲ್ಲವನ್ನೂ ಹದವಾಗಿ ಬೆರೆಸಿರುವ ಕಥೆ. ಚಿತ್ರದಲ್ಲಿ ಸಂದೇಶವಿದೆಯಾದರೂ, ಮನರಂಜನೆ, ಥ್ರಿಲ್ಲಿಂಗಿಗೇ ಆದ್ಯತೆ ಕೊಟ್ಟಿದ್ದಾರೆ ನಿರ್ದೇಶಕ ಅರವಿಂದ್.