ಬಜಾರ್ ಚಿತ್ರದಲ್ಲಿರೋದು ಪಾರಿವಾಳ, ಭೂಗತ ಲೋಕದ ಕಥೆ. ಆ್ಯಕ್ಷನ್ ಸೀನುಗಳಿಗೆ ಬರವೇ ಇಲ್ಲ. ಚಿತ್ರದ ನಾಯಕ ದನ್ವೀರ್ಗೆ ಇದು ಮೊದಲ ಸಿನಿಮಾ. ಎಲ್ಲವೂ ಹೊಸದು. ಹೀಗಿದ್ದರೂ ಚಿತ್ರದಲ್ಲಿ ಫೈಟಿಂಗ್, ಆ್ಯಕ್ಷನ್, ಕಾಮಿಡಿ ಸೀನುಗಳನ್ನು ಮಾಡೋಕೆ ಭಯವಾಗಿರಲಿಲ್ಲವಂತೆ. ಕಾರಣ, ನಿರ್ದೇಶಕ ಸಿಂಪಲ್ ಸುನಿ.
ಅವರು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದರು. ನಾನು ಫಾಲೋ ಮಾಡ್ತಿದ್ದೆ. ಆ್ಯಕ್ಷನ್, ಕಾಮಿಡಿ ಕಷ್ಟವಾಗಲಿಲ್ಲ. ಆದರೆ, ರೊಮ್ಯಾಂಟಿಕ್ ದೃಶ್ಯಗಳೇ ನಿಜಕ್ಕೂ ಕಷ್ಟವಾದವು ಎಂದು ನಗುತ್ತಾರೆ ಧನ್ವೀರ್.
ಕಾರಣ, ಇಷ್ಟೆ, ಲವ್ವಲ್ಲಿ ಧನ್ವೀರ್ ಅನನುಭವಿ. ಎಕ್ಸ್ಪೀರಿಯನ್ಸ್ ನಾಸ್ತಿ ಹುಡುಗ. ಆದರೂ ನಟಿ ಆದಿತಿ ಜೊತೆ ಚೆನ್ನಾಗಿ ನಟಿಸಿದ್ದಾರಂತೆ. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.