` ರಾಕ್‍ಲೈನ್, ಪುನೀತ್ ಸಂಗಮಕ್ಕೆ ದಶಕ ಬೇಕಾಯ್ತು..! - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
puneeth rockline combination waiting for good script
Puneeth Rajkumar, Rockline Venkatesh

ಭಾರತ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಾಕ್‍ಲೈನ್ ವೆಂಕಟೇಶ್, ಡಾ.ರಾಜ್ ಕುಟುಂಬದ ಪ್ರತಿಯೊಬ್ಬರಿಗೂ ಹತ್ತಿರ ಹತ್ತಿರ. ರಾಜ್ ಮನೆಯಲ್ಲಿ ಏನೇ ಆದರೂ ಅಲ್ಲಿ  ರಾಕ್‍ಲೈನ್ ಇರಲೇಬೇಕು. ಅಫ್‍ಕೋರ್ಸ್, ಚಿತ್ರರಂಗದ ಬಹುತೇಕರಿಗೆ ರಾಕ್‍ಲೈನ್ ವೆಂಕಟೇಶ್ ಇರೋದೇ ಹಾಗೆ. ಹೀಗಿದ್ದರೂ, ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ 13 ವರ್ಷಗಳ ಕಾಲ ಸಿನಿಮಾ ಮಾಡೋಕೆ ಆಗಿರಲಿಲ್ಲ.

2004ರಲ್ಲಿ ಮೌರ್ಯ ಹಾಗೂ 2006ರಲ್ಲಿ ಅಜಯ್ ಚಿತ್ರಗಳನ್ನು ಪುನೀತ್ ಅವರಿಗಾಗಿ ನಿರ್ಮಿಸಿದ್ದ ರಾಕ್‍ಲೈನ್ ವೆಂಕಟೇಶ್, 13 ವರ್ಷಗಳ ಕಾಲ ಪುನೀತ್ ಸಿನಿಮಾ ನಿರ್ಮಿಸೋಕೆ ಆಗಿರಲಿಲ್ಲ.

ನಾನು ಮೊದಲು ಕಥೆ ಕೇಳ್ತೇನೆ. ಕಥೆ ಓಕೆ ಎನಿಸಿದ ನಂತರ ಅದಕ್ಕೆ ಯಾರು ಸೂಟ್ ಆಗಬಹುದು ಎಂದು ಹುಡುಕುತ್ತೇನೆ. ನನಗೆ ಪುನೀತ್ ಅವರಿಗೆ ಸೂಟ್ ಆಗಬಹುದಾದ ಕಥೆ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲ, ನನಗೆ ಇಷ್ಟವಾದ ಕಥೆ ಅವರಿಗೂ ಇಷ್ಟವಾಗಬೇಕಲ್ಲ. ಹೀಗಾಗಿ ವಿಳಂಬವಾಯಿತು ಎಂದು ಕಾರಣ ಹೇಳಿದ್ದಾರೆ ರಾಕ್‍ಲೈನ್ ವೆಂಕಟೇಶ್.

ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅತ್ಯದ್ಭುತವಾಗಿ ನಟಿಸಿದ್ದಾರೆ. ಅವರ ಇದುವರೆಗಿನ ಚಿತ್ರಗಳಿಗಿಂತ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಖಂಡಿತಾ ಈ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸಲಿದೆ ಎನ್ನುತ್ತಾರೆ ರಾಕ್‍ಲೈನ್. ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery