ನೀವು ಜಾಕಿಚಾನ್ ಸಿನಿಮಾಗಳನ್ನು ನೋಡಿದ್ದರೆ, ಜಾಕಿಚಾನ್ ಬಿಲ್ಡಿಂಗುಗಳಿಂದ ಬಿಲ್ಡಿಂಗಿಗೆ ಲೀಲಾಜಾಲವಾಗಿ ಹಾರುವ ಸ್ಟಂಟುಗಳನ್ನೂ ನೋಡಿರುತ್ತೀರಿ. ಮಾರ್ಷಲ್ ಆಟ್ರ್ಸ್ ಮಾಸ್ಟರ್ ಆಗಿರುವ ಜಾಕಿಚಾನ್ಗೆ ಅದು ದೊಡ್ಡ ಕಷ್ಟವೇನಲ್ಲ. ಅದೇ ಸ್ಟಂಟ್ನ್ನು ಬೇರೆಯವರು ಮಾಡಬೇಕೆಂದರೆ, ಅದಕ್ಕೆ ಕಠಿಣ ತರಬೇತಿ, ಇಚ್ಛಾಶಕ್ತಿ ಎರಡೂ ಇರಬೇಕು. ಬಜಾರ್ ಹೀರೋ ಧನ್ವೀರ್ ಅಂಥಾದ್ದೊಂದು ರಿಸ್ಕ್ ತೆಗೆದುಕೊಂಡು ಗೆದ್ದಿದ್ದಾರೆ.
ಬಜಾರ್ನಲ್ಲಿ ಬಿಲ್ಡಿಂಗುಗಳಿಂದ ಬಿಲ್ಡಿಂಗಿಗೆ ಹಾರುವ ದೃಶ್ಯಗಳಿವೆ. ಅವುಗಳನ್ನು ಮಾಡೋಕೆ ಧನ್ವೀರ್ ಒಂದೂವರೆ ತಿಂಗಳು ತರಬೇತಿ ಪಡೆದಿದ್ದಾರೆ. ಇಷ್ಟೆಲ್ಲ ಆಗಿಯೂ ಧನ್ವೀರ್ ಅವರಿಗೆ ಸ್ಟಂಟ್ ಮಾಡುವಾಗ ಲಿಗ್ಮೆಂಟ್ ಕ್ರಾಕ್ ಆಗಿದೆ. ಹೀಗಾಗಿ ರೋಪ್ ಹಾಕಿಕೊಂಡು ನಟಿಸಿದ್ದಾರೆ.
ಬಜಾರ್ ಚಿತ್ರದ ಹೈಲೈಟ್ಸ್ ಚಿತ್ರದ ಸ್ಟಂಟುಗಳು. ಚಿತ್ರದಲ್ಲಿರುವ 4 ಫೈಟಿಂಗ್ ಸೀನುಗಳು ಮೈನವಿರೇಳಿಸುವಂತಿವೆ ಎನ್ನುತ್ತಾರೆ ಧನ್ವೀರ್. ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ಭೂಗತ ಜಗತ್ತು, ಲವ್ ಸ್ಟೋರಿ, ಫ್ಯಾಮಿಲಿ ಎಲ್ಲವೂ ಹದವಾಗಿ ಬೆರೆತಿದೆ.