ಬಾಕ್ಸಾಫೀಸ್‍ನಲ್ಲಿ ಮೋಹದ ಅಲೆ ಎಬ್ಬಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರ ತಂಡ, ಅದೇ ಖುಷಿಯಲ್ಲಿ ಸೂಪರ್ ಹಿಟ್ ಹಾಡು ನಿನ್ನ ರಾಜ ನಾನು.. ನನ್ನ ರಾಣಿ ನೀನು ಹಾಡಿನ ವಿಡಿಯೋ ಹೊರಬಿಟ್ಟಿದೆ.
ಲಹರಿ ವಿಡಿಯೋದಿಂದ ಹೊರಬಂದಿರುವ ಚಿತ್ರ ಹಾಡಿನಲ್ಲಿ ರಚಿತಾ ರಾಮ್ ಮುಗ್ಧ ಹುಡುಗಿಯಾಗಿ, ಪೆದ್ದು ಪೆದ್ದಾಗಿ ನಟಿಸಿ ಇಷ್ಟವಾದರೆ, ರಚಿತಾರ ಬೆನ್ನ ಹಿಂದೆ ಕನಸು ಕಾಣುವ ಹುಡುಗನಾಗಿ ಕುಣಿಯುವ ನಿಖಿಲ್ ಅವರ ಡ್ಯಾನ್ಸ್ ಗಮನ ಸೆಳೆಯುತ್ತದೆ.
ನಿರ್ದೇಶಕ ಹರ್ಷ.. ತಾವು ಅದ್ಭುತ ಕೊರಿಯೋಗ್ರಫರ್ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡುತ್ತಾರೆ. ಪ್ರೀತಿಯ ಅಲೆಯಲ್ಲಿ ಮಿಂದೇಳುವವರಿಗೆ ಈ ಹಾಡು ರಿಲ್ಯಾಕ್ಸ್ ಕೊಡುತ್ತದೆ ಅನ್ನೋದ್ರಲ್ಲಿ ಅನುಮಾನವಿಲ್ಲ.