ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ಈ ಬಾರಿಯ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್ ಕೊಡುತ್ತಿದ್ದಾರೆ. ಈ ಹಾಡು ಅಭಿಮಾನಿಗಳ ಕಣ್ಣಲ್ಲಿ ದರ್ಶನ್ ಹೇಗೆ ಕಾಣ್ತಾರೆ ಅನ್ನೋದ್ರ ಮೇಲೆಯೇ ರಚಿತವಾಗಿದೆ. ಫೆಬ್ರವರಿ 16ರಂದು ಈ ಹಾಡನ್ನು ನಾಗೇಂದ್ರ ಪ್ರಸಾದ್ ದರ್ಶನ್ ಅವರಿಗಾಗಿ ಅರ್ಪಿಸಲಿದ್ದಾರೆ.
ದರ್ಶನ್ ಚಿತ್ರಗಳಲ್ಲಿ ಬಹುತೇಕ ಚಿತ್ರಗಳಿಗೆ ಹಾಡು ಬರೆದಿರುವ ನಾಗೇಂದ್ರ ಪ್ರಸಾದ್, ಪ್ರತಿ ವರ್ಷವೂ ಗೆಳೆಯನಿಗೆ ಒಂದಲ್ಲಾ ಒಂದು ವಿಶೇಷ ಉಡುಗೊರೆ ಕೊಡುತ್ತಾರೆ. ಕಳೆದ ಬಾರಿ ಗೆಳೆಯನಿಗೆ `ಶತಸೋದರಾಗ್ರಜ ಶರವೀರ' ಅನ್ನೋ ಬಿರುದು ಕೊಟ್ಟಿದ್ದ ನಾಗೇಂದ್ರ ಪ್ರಸಾದ್, ಈಗ ಹಾಡಿಗೆ ಅಂತಿಮ ರೂಪ ಕೊಡುತ್ತಿದ್ದಾರೆ.
ಈ ಹಾಡು ಅಭಿಮಾನಿಗಳಿಗೆ ಖಂಡಿತಾ ಇಷ್ಟವಾಗಲಿದೆ. ಹಾಡಿಗೆ ಸಂಗೀತವನ್ನೂ ನಾನೇ ನೀಡುತ್ತಿದ್ದೇನೆ ಎಂದಿದ್ದಾರೆ ನಾಗೇಂದ್ರ ಪ್ರಸಾದ್.