` ಅಜೇಯ್ ರಾವ್ ಹೊಸ ಸಿನಿಮಾ ಎಜೆಆರ್ 27 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ajai rao's next is ajr 27
AJR 27

ಅಜೇಯ್ ರಾವ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತಾಯಿಗೆ ತಕ್ಕ ಮಗ ಚಿತ್ರದ ನಂತರ ಅಜೇಯ್ ರಾವ್ ನಟಿಸುತ್ತಿರುವ ಈ ಸಿನಿಮಾಗೆ ಆನಂದ ಪ್ರಿಯ ನಿರ್ದೇಶಕ. ಕಾಶೀನಾಥ್ ಅವರ ಕಟ್ಟಕಡೆಯ ಚಿತ್ರ ಓಳ್ ಮುನಿಸ್ವಾಮಿ ಚಿತ್ರ ನಿರ್ದೇಶಿಸಿದ್ದ ಆನಂದ ಪ್ರಿಯ, ಅಜೇಯ್ ರಾವ್ ಅವರ ಹೊಸ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ.

ಗೋವಿಂದರಾಜ್ ಮತ್ತು ಕೃಷ್ಣಮೂರ್ತಿ ಚಿತ್ರದ ನಿರ್ಮಾಪಕರು. ಎಂದಿನಂತೆ ಶ್ರೀಧರ್ ಸಂಭ್ರಮ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಕಲಾವಿದರು, ತಂತ್ರಜ್ಞರ ಆಯ್ಕೆ ಪ್ರಗತಿಯಲ್ಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery