` ಉಪ್ಪಿ ಸ್ಟೈಲ್‍ನಲ್ಲಿ ನಟಸಾರ್ವಭೌಮ ಅಪ್ಪು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
natasarvabhouma imitates upendra's styles
Upendra, Puneeth Eye Movement

ಉಪೇಂದ್ರ ಅವರ ಸ್ಟೈಲ್ ಎಂದರೆ ಕೆಲವೊಂದು ಟಿಪಿಕಲ್ ಸ್ಟೈಲ್ ನೆನಪಿಗೆ ಬರುತ್ತವೆ. ಉಪ್ಪಿ ಅವರ ಬರಿವೋಳು ಡ್ಯಾನ್ಸ್ ಸ್ಟೆಪ್, ನಡಿಗೆಯ ಶೈಲಿ, ಡೈಲಾಗ್ ಡೆಲಿವರಿ ಸ್ಟೈಲ್, ಉದ್ದನೆಯ ಕೂದಲು, ಕುರುಚಲು ಗಡ್ಡ.. ಹೀಗೆ.. ಈ ಎಲ್ಲದರ ಜೊತೆಗೆ ಗಮನ ಸೆಳೆಯುವುದು ಅವರ ಕಣ್ಣುಗಳು.

ಉಪೇಂದ್ರ ಚಿತ್ರದಲ್ಲಿ ಎರಡೂ ಕಣ್ಣು ಗುಡ್ಡೆಗಳನ್ನು ಅತ್ತಿಂದಿತ್ತ.. ಇತ್ತಿಂದತ್ತ.. ಚಕಚಕನೆ ಚಲಿಸಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದರು ಉಪೇಂದ್ರ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ ತಮ್ಮ ಕಣ್ಣಿನ ಚಿಕಿತ್ಸೆಯ ಕಥೆಯನ್ನು ಬಿಚ್ಚಿಟ್ಟಿದ್ದರು. ತಮಗಿರುವ ನ್ಯೂನತೆಯನ್ನೇ ಪ್ಲಸ್ ಮಾಡಿಕೊಂಡಿದ್ದರು ಉಪ್ಪಿ. ಆದರೆ, ವಿಷಯ ಅದಲ್ಲ.

ಉಪೇಂದ್ರ ಅವರ ಅಭಿಮಾನಿಯೂ ಆಗಿರುವ ಪುನೀತ್ ರಾಜ್‍ಕುಮಾರ್, ಆ ಸ್ಟೈಲ್‍ನ್ನು ಅಷ್ಟೇ ಅದ್ಭುತವಾಗಿ ಪ್ರೆಸೆಂಟ್ ಮಾಡಿದ್ದಾರೆ. ನಟಸಾರ್ವಭೌಮ ಟ್ರೇಲರ್‍ನಲ್ಲಿ ಎಲ್ಲಲರನ್ನೂ ಬೆರಗುಗೊಳಿಸಿದ್ದಾರೆ. ಪುನೀತ್ ರಾಜ್‍ಕುಮಾರ್ ಕಣ್ಣು ಕೂಡಾ ಚಕಚಕನೆ ಕದಲುವುದನ್ನು ನೋಡಿದವರು ಬೆರಗುಗೊಂಡಿದ್ದಾರೆ. 

ನೋಡುವುದಕ್ಕೆ ಸಿಂಪಲ್ ಆಗಿ ಕಂಡರೂ, ಅದು ಅಷ್ಟು ಸುಲಭವಲ್ಲ. ಹಾಗೆ ಚಕಚಕನೆ ಕಣ್ಣಿನ ಗುಡ್ಡೆಗಳನ್ನು ಮೂವ್ ಮಾಡುವುದರಿಂದ ತಲೆನೋವು, ಕಣ್ಣುಗಳಲ್ಲಿ ಅಪಾರ ನೋವು ಸೃಷ್ಟಿಯಾಗುತ್ತೆ. ಆದರೂ, ಸಿನಿಮಾಗಾಗಿ ಆ ರಿಸ್ಕ್ ತೆಗೆದುಕೊಂಡು ಗೆದ್ದಿದ್ದಾರೆ ಅಪ್ಪು.