ಜೆಡಿಎಸ್ನ ವರಿಷ್ಠರು ಟಿಕೆಟ್ ಕೊಟ್ಟರೆ, ಮಂಡ್ಯದಿಂದ ಸ್ಪರ್ಧಿಸೋಕೆ ನಾನ್ ರೆಡಿ. ಸೀತಾರಾಮ ಕಲ್ಯಾಣ ಚಿತ್ರದ ಬಿಡುಗಡೆ ಸಂಭ್ರಮದಲ್ಲಿರೋ ನಿಖಿಲ್, ರಾಜಕೀಯದ ಇಂಗಿತವನ್ನೂ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಅಕಸ್ಮಾತ್ ಮಂಡ್ಯದಲ್ಲಿ ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸಬೇಕು ಎಂದರೆ ಅದಕ್ಕೂ ಸಿದ್ಧ ಎಂದಿದ್ದಾರೆ ನಿಖಿಲ್.
ನನ್ನ ಮತ್ತು ಅಭಿ ನಡುವೆ ಇಂದಿಗೂ ಅತ್ಯುತ್ತಮ ಸ್ನೇಹವಿದೆ. ನಾವಿಬ್ಬರೂ ಗುಡ್ ಫ್ರೆಂಡ್ಸ್. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ರಾಜಕೀಯ ಫ್ಯಾಮಿಲಿಯಿಂದ ಬಂದವನು. ರಾಜಕೀಯಕ್ಕೆ ಹೋಗುವುದು ಸುಲಭವಿದ್ದರೂ, ಅಲೆಗಳ ವಿರುದ್ಧ ಈಜಲೆಂದು ಸಿನಿಮಾಗೆ ಬಂದಿದ್ದೇನೆ. ಸಿನಿಮಾದಲ್ಲಿ ಗೆಲ್ಲುತ್ತೇನೆ. ಸೀತಾರಾಮ ಕಲ್ಯಾಣ ಚಿತ್ರದ ಮೇಲೆ ವಿಶ್ವಾಸವಿದೆ ಎಂದಿದ್ದಾರೆ ನಿಖಿಲ್.