ರಾಜ್ಯಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ವಿಶೇಷತೆಗಳ ಮೇಲೆ ವಿಶೇಷತೆಗಳಿವೆ. ಅವುಗಳೇನೂ ಒಂದೆರಡಲ್ಲ. ನಿಖಿಲ್ ಕುಮಾರಸ್ವಾಮಿ ಅಭಿನಯದ 2ನೇ ಚಿತ್ರವಿದು. ಜಾಗ್ವಾರ್ ನಂತರ ತೆರೆ ಕಾಣುತ್ತಿರುವ ಸಿನಿಮಾ.
ಚಿತ್ರಕ್ಕೆ ಲಕ್ಕಿ ಹೀರೋಯಿನ್ ಎಂದೇ ಹೆಸರಾಗಿರೋ ರಚಿತಾ ರಾಮ್ ನಾಯಕಿ.
ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಗಳಾದ ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡಿದ್ದಾರೆ.
ಶರತ್ ಕುಮಾರ್, ರವಿಶಂಕರ್, ಮಧು, ಭಾಗ್ಯಶ್ರೀ, ಸಂಜಯ್ ಕಪೂರ್, ಆದಿತ್ಯಾ ಮೆನನ್, ಗಿರಿಜಾ ಲೋಕೇಶ್, ಚಿಕ್ಕಣ್ಣ.. ಹೀಗೆ ಕಲಾವಿದರ ದಂಡೇ ಚಿತ್ರದಲ್ಲಿದೆ.
ಚಿತ್ರದಲ್ಲಿ ನಟಿಸಿರುವ ಒಟ್ಟು ಕಲಾವಿದರ ಸಂಖ್ಯೆ 200ಕ್ಕೂ ಹೆಚ್ಚು.
ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ರುಬೆನ್ಸ್. ತಮಿಳು, ತೆಲುಗು, ಹಿಂದಿ ಚಿತ್ರಗಳಿಗೆ ಸಂಗೀತ ನೀಡಿರುವ ರುಬೆನ್ಸ್ಗೆ ಇದು ಮೊದಲ ಕನ್ನಡ ಸಿನಿಮಾ.
ಎ. ಹರ್ಷ ನಿರ್ದೇಶನದ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್.