` ಕುರುಕ್ಷೇತ್ರದ ಬಗ್ಗೆ ಸದ್ಯಕ್ಕೆ ಕೇಳಬೇಡಿ - ಮುನಿರತ್ನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
muniratna says not to ask about kurukshetra now
Muniratna

ಮುನಿರತ್ನ ಕುರುಕ್ಷೇತ್ರ ಬಿಡುಗಡೆ ಯಾವಾಗ..? ಈ ಪ್ರಶ್ನೆ 2 ವರ್ಷಗಳಿಂದ ಜಾರಿಯಲ್ಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50ನೇ ಸಿನಿಮಾ ಆಗಬೇಕಿದ್ದ ಚಿತ್ರವೀನ 51ನೆಯದ್ದೋ.. 52ನೆಯದ್ದೋ ಸಿನಿಮಾ ಆಗುತ್ತಿದೆ. ಇದು ಅಂಬರೀಷ್ ಅಭಿನಯದ ಕಟ್ಟಕಡೆಯ ಸಿನಿಮಾ ಕೂಡಾ ಹೌದು. ಎಲ್ಲ ಓಕೆ. ಸಿನಿಮಾ ರಿಲೀಸ್ ಯಾವಾಗ ಮಾಡ್ತೀರಿ ಅನ್ನೋ ಪ್ರಶ್ನೆಗೆ ಸ್ವತಃ ನಿರ್ಮಾಪಕ ಮುನಿರತ್ನ ಉತ್ತರ ಕೊಟ್ಟಿದ್ದಾರೆ.

`ಕುರುಕ್ಷೇತ್ರ ಚಿತ್ರದ 2ಡಿ ವರ್ಷನ್ ಕಂಪ್ಲೀಟ್ ರೆಡಿ ಇದೆ. ಸೆನ್ಸಾರ್ ಕೂಡಾ ಆಗಿದೆ. ಈಗಲೇ ಎಂದರೆ.. ಈ ಕ್ಷಣವೇ ರಿಲೀಸ್ ಮಾಡಬಹುದು. ಆದರೆ, ನನಗೆ ಅದನ್ನು 3ಡಿ ವರ್ಷನ್‍ನಲ್ಲೂ ಬಿಡುಗಡೆ ಮಾಡುವ ಆಸೆಯಿದೆ. ಅದರ ಕೆಲಸ ಇನ್ನೂ ನಡೆಯುತ್ತಿದೆ. 3ಡಿ ಕೆಲಸ ಮುಗಿದ ಕೂಡಲೇ 2ಡಿ ಮತ್ತು 3ಡಿ ಎರಡರಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಯಾವಾಗ ಮುಗಿಯಲಿದೆ ಅನ್ನೋದು ನನಗೆ ಗೊತ್ತಿಲ್ಲ. ಹೀಗಾಗಿ ಸದ್ಯಕ್ಕೆ ನನ್ನನ್ನು ಏನೂ ಕೇಳಬೇಡಿ' ಎಂದಿದ್ದಾರೆ ಮುನಿರತ್ನ.

ಸೀತಾರಾಮ ಕಲ್ಯಾಣ ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದ ಮುನಿರತ್ನ, ಕುರುಕ್ಷೇತ್ರ ಚಿತ್ರದಲ್ಲೂ ನಿಖಿಲ್ ಅದ್ಭುತವಾಗಿ ನಟಿಸಿದ್ದಾರೆ ಎಂದು ಹೊಗಳಿದ್ದಾರೆ.

Matthe Udbhava Trailer Launch Gallery

Maya Bazaar Pressmeet Gallery