` ಮಗನ ನಟನೆಗೆ ಅಪ್ಪ ಕುಮಾರಸ್ವಾಮಿ ಕೊಟ್ಟ ಅಂಕ ಎಷ್ಟು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
hd kumaraswamy gives his son rank for his acting in seetharama kalyana
Nikhil Kumaraswamy Image from Seetharama Kalyana

ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ನಾಳೆಯೇ ರಿಲೀಸ್. ಟ್ರೇಲರ್, ಹಾಡುಗಳು ಭರ್ಜರಿ ಸದ್ದು ಮಾಡುತ್ತಿರುವಾಗಲೇ ಮಗನ ಅಭಿನಯವನ್ನು ಸ್ವತಃ ಕುಮಾರಸ್ವಾಮಿ ಮೆಚ್ಚಿಕೊಂಡಿದ್ದಾರೆ. 

ಮುಖ್ಯಮಂತ್ರಿಯಾಗಿದ್ದರೂ, ಪ್ರತಿದಿನದ ಶೂಟಿಂಗ್ ದೃಶ್ಯಗಳನ್ನು ಗಮನಿಸುತ್ತಿದ್ದರಂತೆ ಕುಮಾರಸ್ವಾಮಿ. ನಿರ್ದೇಶಕ ಹರ್ಷ ಚಿತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಇಡೀ ಚಿತ್ರತಂಡ ಅದ್ಭುತ ಕೆಲಸ ಮಾಡಿದೆ ಎಂದಿರೋ ಕುಮಾರಸ್ವಾಮಿ, ಮಗ ನಿಖಿಲ್ ಅಭಿನಯಕ್ಕೆ ಫುಲ್ ಮಾಕ್ರ್ಸ್ ಕೊಟ್ಟಿದ್ದಾರೆ. ಮೊದಲ ಸಿನಿಮಾ ಜಾಗ್ವಾರ್‍ಗೆ ಹೋಲಿಸಿದ್ರೆ, ಈ ಚಿತ್ರದಲ್ಲಿ ಇನ್ನೂ ಪಕ್ವಗೊಂಡಿದ್ದಾನೆ. ಸಾಹಸ ದೃಶ್ಯಗಳೂ ಚೆನ್ನಾಗಿ ಮೂಡಿಬಂದಿವೆ. ಹಳ್ಳಿ ಮತ್ತು ನಗರ ಎರಡೂ ಸೊಗಡು ಇರುವ ಕೌಟುಂಬಿಕ ಮನರಂಜನಾತ್ಮಕ ಚಿತ್ರ ಎಂದಿದ್ದಾರೆ ಕುಮಾರಸ್ವಾಮಿ.

Adi Lakshmi Purana Movie Gallery

Rightbanner02_butterfly_inside

Yaana Movie Gallery