` `ನೋ ಕಿಸ್ಸಿಂಗ್.. ಓನ್ಲಿ ಫ್ಯಾಮಿಲಿ'' - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bazaar herone talks about glamorous roles
Aditi Prabhudeva

ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ಕೊಡುವ ಬಹುತೇಕ ನಾಯಕಿಯರು ಕಾಮನ್ ಆಗಿ ಒಂದು ಮಾತು ಹೇಳ್ತಾರೆ. ಗ್ಲ್ಯಾಮರ್ ಓಕೆ. ಆದರೆ, ನಾನು ಎಕ್ಸ್‍ಪೋಸ್ ಮಾಡಲ್ಲ. ಆದರೆ, ಕಥೆ, ಪಾತ್ರ ಡಿಮ್ಯಾಂಡ್ ಮಾಡಿದರೆ ನಾನು ರೆಡಿ ಅಂಥಾರೆ. ಆದರೆ, ಬಜಾರ್ ಹೀರೋಯಿನ್ ಆದಿತಿ ನೇರಾನೇರವಾಗಿ ಒಂದು ಮಾತು ಹೇಳಿದ್ದಾರೆ.

`ನೋ.. ನನಗೆ ತುಂಡುಡುಗೆ ಆಗಿಬರಲ್ಲ. ಅಂತಹ ಡ್ರೆಸ್ ಹಾಕಿದರೆ ಬಹಳ ಅನ್‍ಕಂಫರ್ಟಬಲ್ ಫೀಲ್ ಆಗುತ್ತೆ. ಗ್ಲಾಮರಸ್ ಪಾತ್ರಕ್ಕಿಂತ ಹೋಮ್ಲಿಯಾಗಿರೋದೇ ಇಷ್ಟ. ಕಿಸ್ಸಿಂಗ್ ಸೀನ್‍ಗಳನ್ನು ಯಾವುದೇ ಕಾರಣಕ್ಕೂ ಮಾಡಲ್ಲ. ಬೋಲ್ಡ್ ದೃಶ್ಯಗಳಲ್ಲಿ ನಟಿಸೋಕೆ ನನಗೆ ಆಗಲ್ಲ. ಹೀಗಾಗಿಯೇ ಕೆಲವು ಚಿತ್ರಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಅದಕ್ಕೆ ನನಗೇನೂ ಬೇಜಾರಿಲ್ಲ''

ಅಂದಹಾಗೆ ಬಜಾರ್ ಆದಿತಿ ಪ್ರಭುದೇವ ಅಭಿನಯದ ಮೊದಲ ಸಿನಿಮಾ. ಧನ್ವೀರ್ ಎದುರು ನಾಯಕಿಯಾಗಿ ನಟಿಸಿರುವ ಆದಿತಿ, ಈಗಾಗಲೇ ಮತ್ತೆರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ.

 

India Vs England Pressmeet Gallery

Odeya Audio Launch Gallery