ಬಜಾರ್. ಪಾರಿವಾಳಗಳ ರೇಸ್ ಮತ್ತು ಭೂಗತ ಜಗತ್ತಿನ ಕಥೆ. ಈ ಚಿತ್ರದಲ್ಲಿ ಹೀರೋ-ಹೀರೋಯಿನ್ ಅವರಷ್ಟೇ ಪ್ರಧಾನ ಪಾತ್ರ ಪಾರಿವಾಳಗಳದ್ದು. ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗಿದ್ದೇ ಅದು. ಅದರಲ್ಲೂ ಶೂಟಿಂಗ್ ವೇಳೆ ಚಿತ್ರತಂಡದವರು ಪಾರಿವಾಳಗಳ ಜೊತೆ ಬಾಂಧವ್ಯ ಬೆಳೆಸಿಕೊಂಡುಬಿಟ್ಟಿದ್ದರು.
ಅದರಲ್ಲೂ ನಾಯಕಿ ಆದಿತಿ, ಸೆಟ್ನಲ್ಲಿದ್ದ ನೂರಾರು ಪಾರಿವಾಳಗಳ ಪೈಕಿ ಎರಡನ್ನು ಸಾಕಿದ್ದರಂತೆ. ಅವುಗಳಿಗೆ ಬೆಳ್ಳಿ, ಚುಕ್ಕಿ ಎಂದೂ ಹೆಸರಿಟ್ಟಿದ್ದರಂತೆ. ಸೆಟ್ಗೆ ಬಂದ ಕೂಡಲೇ ಕಣ್ಣಿಗೆ ಬೆಳ್ಳಿ, ಚುಕ್ಕಿ ಕಾಣಿಸಿಕೊಳ್ಳಬೇಕು. ಇಲ್ಲದಿದ್ದರೆ ಏನೋ ತಳಮಳವಾಗುತ್ತಿತ್ತು. ಏನನ್ನೋ ಕಳೆದುಕೊಂಡಂತಾಗುತ್ತಿತ್ತು ಎಂದಿದ್ದಾರೆ ಆದಿತಿ ಪ್ರಭುದೇವ.
ಚಿತ್ರದಲ್ಲಿ ಆದಿತಿ ಟೈಲರಿಂಗ್ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಮಹತ್ವಾಕಾಂಕ್ಷೆಯ ಹುಡುಗಿ. ಧನ್ವೀರ್ ನಾಯಕರಾಗಿರುವ ಚಿತ್ರಕ್ಕೆ, ಸಿಂಪಲ್ ಸುನಿ ನಿರ್ದೇಶಕ. ಮುಂದಿನ ವಾರ ತೆರೆಗೆ ಬರುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ.