ನಾನು ಕರ್ನಾಟಕದವಳಲ್ಲ. ಆದರೆ, ಜನ ಮೆಚ್ಚಿದ್ದು ಕರ್ನಾಟಕದಲ್ಲಿ. ಕನ್ನಡ ಚಿತ್ರರಂಗದಲ್ಲಿ. ನನಗೆ ಈಗಲೂ ಕನ್ನಡ ಅಷ್ಟಾಗಿ ಬರುವುದಿಲ್ಲ. ಎಷ್ಟೋ ಬಾರಿ ತಪ್ಪುಗಳಾಗುತ್ತವೆ. ಆದರೆ, ನಾನು ಕನ್ನಡ ಕಲಿಯುತ್ತಿದ್ದೇನೆ. ಅಭಿಮಾನಿಗಳ ಜೊತೆ ನಾನು ಯಾವಾಗಲೂ ಕನ್ನಡದಲ್ಲೇ ಮಾತನಾಡುತ್ತೇನೆ. ತಪ್ಪಾದಾಗ ಅಭಿಮಾನಿಗಳೇ ತಿದ್ದುತ್ತಾರೆ. ಬೇಸರ ಮಾಡಿಕೊಳ್ಳಲ್ಲ.
ಇದು ಪಾರುಲ್ ಯಾದವ್ ಮಾತು. ಬಟರ್ ಫ್ಲೈ ಚಿತ್ರದ ಬಿಡುಗಡೆ ಸಂಭ್ರಮದಲ್ಲಿರುವ ಪಾರುಲ್ ಯಾದವ್, ತಾನೇಕೆ ಕನ್ನಡ ಕಲಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ ಪಾರುಲ್ ಕನ್ನಡ ಕಲಿಯೋದಕ್ಕೆ ಸ್ಫೂರ್ತಿ ಡಾ.ರಾಜ್ ಕುಮಾರ್.