ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಪುನೀತ್ ರಾಜ್‍ಕುಮಾರ್ ಬ್ಯಾನರ್‍ನಲ್ಲಿ ನಟಿಸುತ್ತಿದ್ದಾರೆ. ನಂದಿನಿ ಅನ್ನೋ ಲಾಯರ್ ಪಾತ್ರದಲ್ಲಿ, ಪ್ರತಿಯೊಂದನ್ನೂ ಪ್ರಶ್ನಿಸುವ ದಿಟ್ಟ ಹೆಣ್ಣು ಮಗಳ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ ರಾಗಿಣಿ. ಹಾಗಂತ, ಅವರಿಗೆ ಕ್ಯಾಮೆರಾ ಹೊಸದಲ್ಲ. ವೃತ್ತಿಯಲ್ಲಿ ಮಾಡೆಲ್ ಆಗಿರುವ ರಾಗಿಣಿ, ಜಾಹೀರಾತುಗಳಲ್ಲಿ, ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ನನಗೆ ಕ್ಯಾಮೆರಾ ಹೊಸದಲ್ಲ. ಆದರೂ ಮೊದಲ ಬಾರಿ ಅಷ್ಟುದ್ದದ ಡೈಲಾಗ್ ಹೇಳುವಾಗ ಕಷ್ಟವಾಯ್ತು ಎಂದಿದ್ದಾರೆ ರಾಗಿಣಿ.
ಹಾಗಂತ ಮುಂದಿನ ಭವಿಷ್ಯವನ್ನು ಸಿನಿಮಾದಲ್ಲಿಯೇ ಹುಡುಕಿಕೊಳ್ತೀರಾ ಅಂದ್ರೆ ಸ್ಪಷ್ಟವಾಗಿ ನೋ ಅಂತಾರೆ. ನೃತ್ಯ ನನ್ನ ಆದ್ಯತೆ. ಅದು ನನ್ನ ಲೈಫ್. ತಿಂಗಳಲ್ಲಿ 15 ದಿನ ಡ್ಯಾನ್ಸ್ ಶೋ, ಕಥಕ್‍ನಲ್ಲಿ ಬ್ಯುಸಿ ಇರ್ತೀನಿ. ತುಂಬಾ ಒಳ್ಳೆಯ ಸ್ಕ್ರಿಪ್ಟ್ ಬಂದರೆ ಮಾತ್ರ ಸಿನಿಮಾ ಎಂದಿದ್ದಾರೆ ರಾಗಿಣಿ.