ಗಾಳಿಪಟ 2 ಚಿತ್ರವನ್ನ ಭಟ್ಟರೇ ಮಾಡುತ್ತಿದ್ದಾರೆ ಅನ್ನೋದು ಈಗ ಗುಟ್ಟೇನಲ್ಲ. ಯೋಗರಾಜ್ ಭಟ್ಟರೇ ಅದನ್ನು ಹೇಳಿಕೊಂಡಿದ್ದರು. ಈಗ ಚಿತ್ರದ ಇನ್ನೊಂದಿಷ್ಟು ಕುತೂಹಲಗಳನ್ನು ಹೊರಹಾಕಿದ್ದಾರೆ. ಗಾಳಿಪಟ 2 ಅನ್ನೋದು ಮೂವರು ನಾಯಕರ ಕಥೆ. ಒಬ್ಬ ಮೇಲ್ವರ್ಗ, ಒಬ್ಬ ಮಧ್ಯಮ ವರ್ಗ ಹಾಗೂ ಒಬ್ಬ ಕೆಳವರ್ಗದ ಹುಡುಗನ ಕಥೆ. ಅವರೇ ಶರಣ್, ರಿಷಿ ಹಾಗೂ ಲೂಸಿಯಾ ಪವನ್.
ಆ ಮೂವರಿಗೆ ಐವರು ಚೆಲುವೆಯರು. ಶರ್ಮಿಳಾ ಮಾಂಡ್ರೆ, ಸೋನಲ್ ಆಯ್ಕೆ ಫೈನಲ್ ಆಗಿದೆ. ಇನ್ನುಳಿದವರಿಗೆ ಅಡಿಷನ್ ನಡೆಯುತ್ತಿದೆ. ಭಟ್ಟರಿಗೀಗ ಒಬ್ಬ ಚೈನೀಸ್ ಹುಡುಗಿ, ಒಬ್ಬ ಬೆಂಗಾಳಿ ಹುಡುಗಿ ಮತ್ತೊಬ್ಬಳು ವಿದೇಶಿ ಮಾಡೆಲ್ ಬೇಕಿದೆ. ಅನುಮಾನವೇ ಇಲ್ಲದಂತೆ ಇದೊಂದು ಪಕ್ಕಾ ಲವ್ ಸ್ಟೋರಿ.
ಗಾಳಿಪಟದಲ್ಲಿ ಮಲೆನಾಡನ್ನು ಚೆಂದವಾಗಿ ತೋರಿಸಿದ್ದ ಭಟ್ಟರು, ಗಾಳಿಪಟ 2ನಲ್ಲಿ ವಿದೇಶಕ್ಕೆ ಹಾರುತ್ತಿದ್ದಾರೆ. ಗುಜರಾತಿ ಸಿನಿಮಾಗಳಲ್ಲಿ ಹೆಸರು ಮಾಡಿರುವ ನಿರ್ಮಾಪಕ ಮಹೇಶ್ ಧಾನನ್ನವರ್ ಚಿತ್ರದ ನಿರ್ಮಾಪಕ. ಈ ಮಹೇಶ್, ಬೆಳಗಾವಿಯವರು ಅನ್ನೋದು ಮತ್ತೊಂದು ವಿಶೇಷ.