ನವರಸ ನಾಯಕ ಜಗ್ಗೇಶ್, ಮೈಸೂರು ಮಲ್ಲಿಗೆ ಸುಧಾರಾಣಿ, ರೋಜಾ ಮಧುಬಾಲಾ ಒಟ್ಟಿಗೇ ನಟಿಸಿರುವ ಸಿನಿಮಾ ಪ್ರೀಮಿಯರ್ ಪದ್ಮಿನಿ. ಕಿರುತೆರೆಯ ಸ್ಟಾರ್ ನಿರ್ಮಾಪಕಿ ಶೃತಿ ನಾಯ್ಡು ನಿರ್ಮಾಣದ ಮೊದಲ ಸಿನಿಮಾ. ಚಿತ್ರೀಕರಣ ಮುಗಿಸಿ ಕುಂಭಳಕಾಯಿ ಹೊಡೆದಿದೆ.
ರಮೇಶ್ ಇಂದಿರಾ ನಿರ್ದೇಶನದ ಸಿನಿಮಾದಲ್ಲಿ ಸಾಂಸಾರಿಕ ಜೀವನದ ಏರುಪೇರುಗಳ ಕಥೆ ಇದೆ. ಡೈವೋರ್ಸ್ ಒಳಸುಳಿಗಳ ಚಿತ್ರಣವಿದೆ. ಎಲ್ಲವನ್ನೂ ಹಾಸ್ಯದಲ್ಲಿಯೇ ಹೇಳಲಾಗಿದೆ.
ಇದು ಅಪ್ಪಟ ಸ್ವಮೇಕ್ ಸಿನಿಮಾ. ಕಾರು ಚೆನ್ನಾಗಿ ಹೋಗಬೇಕು ಎಂದರೆ, ಕಾರು, ಡ್ರೈವರ್ ಮತ್ತು ಮಾಲೀಕರ ಮಧ್ಯೆ ಒಂದು ಬಾಂಡ್ ಇರಬೇಕು. ಸಂಸಾರದಲ್ಲೂ ಅಷ್ಟೆ, ಇಲ್ಲಿ ಕಾರು ಸಾಂಕೇತಿಕವಾಗಿ ಬಳಕೆಯಾಗಿದೆ ಎಂದಿದ್ದಾರೆ ನಿರ್ದೇಶಕ ರಮೇಶ್ ಇಂದಿರಾ.