ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ಫೆಬ್ರವರಿ 7ರಂದು ಬಹುಮಾನ ಸಿಗುತ್ತಿದೆ. ನಟಸಾರ್ವಭೌಮ ಚಿತ್ರದ ಮೂಲಕ. ಚಿತ್ರ ಸೆನ್ಸಾರ್ ಪಾಸ್ ಆಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಚಿತ್ರದ ಒಟ್ಟು ಅವದಿ 155 ನಿಮಿಷ. ಅರ್ಥಾತ್.. 2 ಗಂಟೆ, 35 ನಿಮಿಷ.
ಈಗಾಗಲೇ ಚಿತ್ರದ ಮೂರು ಹಾಡುಗಳು ರಿಲೀಸ್ ಆಗಿದ್ದು, ಮೂರೂ ಹಾಡುಗಳು ಹಿಟ್ ಆಗಿವೆ. ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಪುನೀತ್ ಪತ್ರಕರ್ತನಾಗಿ ನಟಿಸಿದ್ದಾರೆ. ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್ ಚಿತ್ರಕ್ಕೆ ನಾಯಕಿಯರು. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ದಶಕಗಳ ನಂತರ ಬಿ.ಸರೋಜಾದೇವಿ ಬಣ್ಣ ಹಚ್ಚಿರುವುದು ವಿಶೇಷ.