ದಬಂಗ್ ಮತ್ತೊಮ್ಮೆ ಬರುತ್ತಿದೆ. ಅದೇ ಸಲ್ಮಾನ್ ಖಾನ್, ಚುಲ್‍ಬುಲ್ ಪಾಂಡೆಯಾಗಿ ಬರುತ್ತಿದ್ದಾರೆ. ಈ ಬಾರಿ ಚುಲ್‍ಬುಲ್ ಪಾಂಡೆಗೆ ಸ್ಟಾರ್ಟ್.. ಕ್ಯಾಮೆರಾ.. ಆ್ಯಕ್ಷನ್ ಎನ್ನುತ್ತಿರುವುದು ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ. ಈ ಬಾರಿ ಚುಲ್‍ಬುಲ್ ಪಾಂಡೆಗೆ ಸವಾಲು ಹಾಕೋಕೆ ರೆಡಿಯಾಗಿರುವುದು ನಮ್ಮ ಕಿಚ್ಚ ಸುದೀಪ್.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಟೈಗರ್ ಜಿಂದಾ ಹೈ ಚಿತ್ರದಲ್ಲೇ ಸಲ್ಮಾನ್ ಜೊತೆ ಸುದೀಪ್ ನಟಿಸಬೇಕಿತ್ತು. ಅದು ಈಗ ದಬಂಗ್ 3 ಮೂಲಕ ಈಡೇರುತ್ತಿದೆ. ನಿರ್ದೇಶಕ ಪ್ರಭುದೇವ ಈಗಾಗಲೇ ಸುದೀಪ್ ಅವರಿಗೆ ಕಥೆ, ಪಾತ್ರದ ಕುರಿತು ವಿವರ ಕೊಟ್ಟಿದ್ದಾರಂತೆ. ಸುದೀಪ್ ಕೂಡಾ ಓಕೆ ಎಂದಿದ್ದಾರೆ.
ಒಂದು ಸುತ್ತಿನ ಮಾತುಕತೆ ನಡೆದಿದೆ. ಆದರೆ, ಅಧಿಕೃತವಾಗಿ ಇನ್ನೂ ಫೈನಲ್ ಆಗಿಲ್ಲ. ನಾನು ಯೆಸ್ ಎಂದಿರುವುದು ನಿಜ ಎಂದಿದ್ದಾರೆ ಸುದೀಪ್.ಬಹುಶಃ ಏಪ್ರಿಲ್‍ನಲ್ಲಿ ದಬಂಗ್ 3 ಶುರುವಾಗೋ ಚಾನ್ಸ್ ಇದೆ.