ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಯಾಂಡಲ್‍ವುಡ್ ಸಲ್ಮಾನ್ ಖಾನ್. ಬಾಲಿವುಡ್‍ಗೆ ಸಲ್ಮಾನ್ ಹೇಗೋ ಹಾಗೆ ಕನ್ನಡಕ್ಕೆ ದರ್ಶನ್. ದರ್ಶನ್ ಚಿತ್ರದ ನಂದಿ ಹಾಡು ಸೃಷ್ಟಿಸುತ್ತಿರುವ ದಾಖಲೆಗಳೇ ಎಲ್ಲವನ್ನೂ ಹೇಳುತ್ತಿವೆ. ಹೀಗೆ ಹೇಳಿರುವುದು ಬೇರ್ಯಾರೂ ಅಲ್ಲ, ಚಿತ್ರದ ನಿರ್ಮಾಪಕಿ ಶೈಲಜಾ ಸುರೇಶ್.
ಬಿ.ಸುರೇಶ್ ಬ್ಯಾನರ್‍ನಲ್ಲಿ ಬರುತ್ತಿರುವ ಮೊದಲ ಕಮರ್ಷಿಯಲ್ ಸಿನಿಮಾ ಹಾಗೂ ಭಾರಿ ಬಜೆಟ್‍ನ ಸಿನಿಮಾ ಯಜಮಾನ. ದರ್ಶನ್‍ಗೆ ಕಥೆ ಹೇಳೋಕೆ ಹೋದಾಗ ಎರಡು ಕಥೆ ರೆಡಿ ಮಾಡಿಟ್ಟುಕೊಂಡು ಹೋಗಿದ್ದರಂತೆ. ಎರಡೂ ಕಥೆ ಕೇಳಿದ ದರ್ಶನ್, ಯಜಮಾನ ಕಥೆಗೆ ಓಕೆ ಎಂದಿದ್ದಾರೆ. ಅಷ್ಟೆ ಅಲ್ಲ, ಎರಡನೇ ಕಥೆಯೂ ಇಷ್ಟವಾಗಿ, ಆ ಕಥೆಗೂ ಕಾಲ್‍ಶೀಟ್ ಕೊಟ್ಟಿದ್ದಾರೆ ದರ್ಶನ್. ಇವೆಲ್ಲವನ್ನೂ ಖುಷಿಯಿಂದ ಹೇಳಿಕೊಂಡಿರೋ ನಿರ್ಮಾಪಕಿ ಶೈಲಜಾ ನಾಗ್, ಫೆಬ್ರವರಿಯಲ್ಲಿ ಚಿತ್ರದ ರಿಲೀಸ್ ಖಚಿತ ಎಂದಿದ್ದಾರೆ.