ಯೋಗರಾಜ ಭಟ್ಟರೇ ಹಾಗೆ.. ನೋಡುಗರು, ಓದುಗರು, ವೀಕ್ಷಕರ ತಲೆಗೆ ಒಂದು ಹುಳದ ಬಿಡದೆ ಇದ್ದರೆ.. ಅವರು ಭಟ್ಟರೇ ಅಲ್ಲ. ಪಂಚತಂತ್ರ ಸುರುವಾತಿನಿಂದ ಇಂಥದ್ದೇ ಒಂದು ಹುಳ ಬಿಟ್ಟಿದ್ದರು ಭಟ್ಟರು. ಅದು ಯಬಸ್.
ಏನ್ರೀ ಅದು ಯಬಸ್ ಅಂದ್ರ ಮಳ್ಳಗೆ ನಕ್ಕು ಸುಮ್ಮನಾಗುತ್ತಿದ್ದ ಭಟ್ಟರು, ಈಗ ಆ ಪದದ ಅರ್ಥವನ್ನೆಲ್ಲ ಹೇಳಿದ್ದಾರೆ. ಯಬಸ್ ಅನ್ನೋದು ಉತ್ತರ ಕರ್ನಾಟಕದ ಪದ. ಧಾರವಾಡ ಆ ಪದದ ಹುಟ್ಟೂರು. ಯಬಸ್ ಅಂದ್ರೆ ಬೇರೇನಲ್ಲ.. ಎಬ್ಬಿಸು ಅಥವಾ ನುಗ್ಗು ಎಂದರ್ಥ.
ನಾವು ಅದನ್ನ ಆಟದಲ್ಲಿ ಬಳಸ್ತಾ ಇದ್ವಿ. ಲೆಟ್ಸ್ ಡು ಸಂಥಿಂಗ್, ಎದ್ದೇಳಿಸು.. ಸುಮ್ಮನೆ ಕೂರೋದು ಬೇಡ. ಏನಾದರೂ ಮಾಡೋಣ.. ಅನ್ನೋ ಅರ್ಥದಲ್ಲಿ ಈ ಪದದ ಬಳಕೆ ಇದೆ. ಈ ಪದದ ಸೃಷ್ಟಿಕರ್ತ ಯಾರೋ ನನಗೆ ಗೊತ್ತಿಲ್ಲ. ಉತ್ತರ ಕರ್ನಾಟಕದ ಕೆಲವು ಮಂದಿಗಾದರೂ ಈ ಪದ ಗೊತ್ತಿರುತ್ತೆ ಎಂದಿದ್ದಾರೆ ಭಟ್ಟರು.
ಧಾರವಾಡದ ಪದಗಳ ಮಾಂತ್ರಿಕ ಶಕ್ತಿಯೇ ಅದು.