ಯಜಮಾನ ಚಿತ್ರದ ಮೊದಲ ಲಿರಿಕಲ್ ಸಾಂಗ್ ವಿಡಿಯೋ ಹೊರಬಂದಿದೆ. ನಂದಿ.. ನಂದಿ.. ಶಿವನಂದಿ.. ಎಂದು ಸಾಗುವ ಹಾಡು ಹೀರೋ ಇಂಟ್ರೊಡಕ್ಷನ್ ಸಾಂಗ್ ಇರಬೇಕು. ದರ್ಶನ್ ಅವರ ಮೇಲೆ ಬರೆದಿರುವ ಹಾಡಲ್ಲಿ, ಯಜಮಾನ ದರ್ಶನ್ ಊರಿನ ರಕ್ಷಕ ಇರಬೇಕು ಎಂಬ ಭಾವನೆ ಮೂಡುವಂತಿದೆ.
ದರ್ಶನ್ ಅವರ ಯಜಮಾನ ಚಿತ್ರದ ಮೊದಲ ಹಾಡಿನ ಝಲಕ್ ಇದು. ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಟಿಸಿರುವ ಚಿತ್ರಕ್ಕೆ ಪಿ.ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶಕರು. ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ ಹರಿಕೃಷ್ಣ. ಭರ್ಜರಿ ಚೇತನ್ ಕುಮಾರ್ ಬರೆದಿರುವ ಹಾಡು
ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಸಿನಿಮಾ ಫೆಬ್ರವರಿ ಎಂಡ್ ಅಥವಾ ಮಾರ್ಚ್‍ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಚಿತ್ರದ ಹಾಡಂತೂ ಆನ್‍ಲೈನ್‍ನಲ್ಲಿ ದಾಖಲೆಗಳನ್ನು ಚಿಂದಿ ಚಿಂದಿ ಮಾಡುತ್ತಿದೆ.