ಕೆಜಿಎಫ್ ಚಿತ್ರ 200 ಕೋಟಿ ಕ್ಲಬ್ ಸೇರಿದೆ ಎನ್ನುವ ಸುದ್ದಿ ಹರಿದಾಡುತ್ತಿರುವಾಗಲೇ ಚಿತ್ರದ ಕಲೆಕ್ಷನ್ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ. ಚಿತ್ರದ ಕಲೆಕ್ಷನ್ ಬಗ್ಗೆ ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ. ಚಿತ್ರ ಇನ್ನೂ 600 ಸ್ಕ್ರೀನ್‍ಗಳಲ್ಲಿ ಚೆನ್ನಾಗಿ ಹೋಗುತ್ತಿದೆ. ಒಂದು ತಿಂಗಳು ಸುಮ್ಮನಿರಿ. ನಾನೇ ಎಲ್ಲವನ್ನೂ ನಿಮ್ಮ ಮುಂದೆ ಲೆಕ್ಕ ಹೇಳುತ್ತೇನೆ' ಎಂದಿದ್ದಾರೆ ವಿಜಯ್ ಕಿರಗಂದೂರು.
200 ಕೋಟಿ ದಾಟಿದೆ ಎನ್ನುವ ಸುದ್ದಿಯನ್ನು ವಿಜಯ್ ನಿರಾಕರಿಸಿದ್ದಾರೆ. ಚಿತ್ರ ಹಿಂದಿಯಲ್ಲಿಯೇ 600 ಸ್ಕ್ರೀನ್‍ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ರಿಲೀಸ್ ಆಗಿರುವ ಎಲ್ಲ ಸೆಂಟರ್‍ಗಳಲ್ಲಿ ಈಗಲೂ ಚೆನ್ನಾಗಿ ಹೋಗುತ್ತಿದೆ. ಪಾಕಿಸ್ತಾನದಲ್ಲೂ ರಿಲೀಸ್ ಆಗಿದೆ. ಎಲ್ಲ ಲೆಕ್ಕವನ್ನೂ ಮುಂದಿನ ತಿಂಗಳು ಕೊಡುತ್ತೇನೆ ಎಂದಿದ್ದಾರೆ ಕೆಜಿಎಫ್‍ನ ಮಾಲೀಕ ವಿಜಯ್ ಕಿರಗಂದೂರು.