ಪೈಲ್ವಾನ್.. ನಮ್ಮ ಕಿಚ್ಚ ಸುದೀಪ್ ಅಭಿನಯದ ಸಿನಿಮಾ. ಸುಲ್ತಾನ್, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಸಿನಿಮಾ. ಆ ಚಿತ್ರವೂ ಕೂಡಾ ಬಾಕ್ಸಿಂಗ್ ಪಟುವೊಬ್ಬನ ಕಥೆ ಹೊಂದಿತ್ತು. ಕುಸ್ತಿ, ರಸ್ಲಿಂಗ್, ಒಂದು ಲವ್ ಸ್ಟೋರಿ, ತಾಯಿ ಪ್ರೇಮ.. ಹೀಗೆ ಎಲ್ಲವನ್ನೂ ಒಳಗೊಂಡಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಕಿಚ್ಚನ ಪೈಲ್ವಾನ್. ಸಂಕ್ರಾಂತಿ ಹಬ್ಬಕ್ಕೆಂದೇ ಸುದೀಪ್ ಮತ್ತು ಕೃಷ್ಣ ನೀಡಿರುವ ಉಡುಗೊರೆ ಚಿತ್ರದ ಟೀಸರ್.
ಹುರಿಗಟ್ಟಿದ ಮೈ, ಅಖಾಡದ ಮಣ್ಣಿನಲ್ಲಿ ಮಿರಿ ಮಿರಿ ಮಿಂಚುವ ದೇಹದ ಸುದೀಪ್, ಆ ಕುಸ್ತಿ.. ಎಲ್ಲವೂ ಇದೆಲ್ಲವನ್ನೂ ಮಾಡಿರೋದು ಕಿಚ್ಚನಾ ಎಂದು ಹುಬ್ಬೇರಿಸುವಂತಿವೆ. ಅಷ್ಟರಮಟ್ಟಿಗೆ ಬದಲಾಗಿ ಹೋಗಿದ್ದಾರೆ ಕಿಚ್ಚ.
ಹೀಗಾಗಿಯೇ.. ಪೈಲ್ವಾನನ ಟೀಸರ್ ಅಭಿಮಾನಿಗಳಿಗಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ದಿಗ್ಗಜರನ್ನೂ ಬಡಿದೆಬ್ಬಿಸಿದೆ. ಪೈಲ್ವಾನ್ ಟೀಸರ್‍ಗೆ ವ್ಹಾವ್ ಎಂದಿರೋದು ಸಲ್ಮಾನ್. ಇದನ್ನು ಸ್ವತಃ ನಿರೀಕ್ಷಿಸಿರದೇ ಇದ್ದ ಸುದೀಪ್‍ಗೆ ಇದು ಅತಿದೊಡ್ಡ ಸರ್‍ಪ್ರೈಸ್.
ಇಷ್ಟೇ ಅಲ್ಲ, ತೆಲುಗು, ತಮಿಳು, ಬಾಲಿವುಡ್‍ನ ನಿರ್ದೇಶಕರು, ನಟರು ಪೈಲ್ವಾನ್ ಟೀಸರ್‍ನ್ನು ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲ ಕಲಾವಿದರೂ, ತಂತ್ರಜ್ಞರು ಪೈಲ್ವಾನ್ ಟೀಸರ್ ನೋಡಿ.. ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಬೆನ್ನು ತಟ್ಟಿದ್ದಾರೆ.
ಅಂದಹಾಗೆ.. ಇದು ಟೀಸರ್ ಮಾತ್ರ. ಟ್ರೇಲರ್ ಬಾಕಿ ಇದೆ. ಸಿನಿಮಾ ಇನ್ನೂ ಬರಬೇಕಿದೆ.